ಬಾ.ನಾ.ಸುಬ್ರಹ್ಮಣ್ಯ
ನಿನ್ನೆ ತೆರೆಕಂಡ ತೆಲುಗು ಚಿತ್ರ ‘ಪುಷ್ಪಾ-ದ ರೂಲ್’ ಹೊಸ ದಾಖಲೆಯನ್ನು ಬರೆದಿದೆ. ಸುದ್ದಿ, ಪ್ರಚಾರ ನಿಜವೇ ಆಗಿದ್ದರೆ, ಚಿತ್ರ ತೆರೆಕಾಣುವ ಮೊದಲೇ ಅದು ಸಾವಿರ ಕೋಟಿ ರೂ.ಗಳಿಗೂ ಮಿಗಿಲಾಗಿ ವ್ಯಾಪಾರ ಮಾಡಿತ್ತು. ಒಟಿಟಿಯಲ್ಲಿ ಪ್ರಸಾರದ ಹಕ್ಕನ್ನು ಪಡೆದ ತಾಣ ಹಿಂದೆಂದೂ, ಯಾವುದೇ ಭಾರತೀಯ ಭಾಷಾ ಚಿತ್ರಕ್ಕೂ ನೀಡದಷ್ಟು ರಾಯಧನ ನೀಡಿ ಚಿತ್ರವನ್ನು ತನ್ನದಾಗಿಸಿಕೊಂಡಿದೆ. ನಿನ್ನೆ ವಿಶ್ವಾದ್ಯಂತ ೧೨,೦೦೦ ಚಿತ್ರಮಂದಿರ ಗಳಲ್ಲಿ ಚಿತ್ರ ತೆರೆಗೆ ಬಂದಿದೆ!
ಕನ್ನಡ ಚಿತ್ರಗಳ ವ್ಯವಹಾರದ ವೇಳೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುವ ಇಲ್ಲಿನ ಚಿತ್ರೋದ್ಯಮ ಪರಭಾಷಾ ಚಿತ್ರಗಳ ವಿಷಯದಲ್ಲಿ ಭಾರಿ ಉದಾರಿ. ಕೋಟಿ ರೂ.ಗಳನ್ನು ಚೆಲ್ಲಿ ಕರ್ನಾಟಕದಲ್ಲಿ ಪ್ರದರ್ಶನದ ಹಕ್ಕನ್ನು ಪಡೆದುಕೊಳ್ಳುವ ವಿತರಕ/ಪ್ರದರ್ಶಕರಿಗೆ ಇಲ್ಲಿ ಕೊರತೆ ಇಲ್ಲ. ಅಷ್ಟೇ ಅಲ್ಲ, ತಾವು ಹಾಕಿದ ಬಂಡವಾಳವನ್ನು ಬಹಳ ಬೇಗ ಪಡೆಯಲು ದುಬಾರಿ ಪ್ರವೇಶ ಶುಲ್ಕವನ್ನೂ ನಿಗದಿಪಡಿಸುತ್ತಾರೆ ಈ ಮಂದಿ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಇಲ್ಲದ ದುಬಾರಿ ಪ್ರವೇಶ ದರ ಕರ್ನಾಟಕದಲ್ಲಿ ಇರುತ್ತದೆ.
ಸಾಮಾನ್ಯವಾಗಿ ಈ ಬಗ್ಗೆ ಪ್ರದರ್ಶಕರನ್ನು ಕೇಳಿದರೆ, ‘ಇಲ್ಲಿ ನಮ್ಮ ತಪ್ಪೇನೂ ಇಲ್ಲ. ವಿತರಕರು ಹೇಳಿದ ಹಾಗೆ ನಾವು ಪ್ರವೇಶ ದರ ನಿಗದಿ ಮಾಡುತ್ತೇವೆ. ಅವರು ಹೆಚ್ಚು ಮಾಡಲು ಹೇಳಿದರೆ ಹೆಚ್ಚು; ಕಡಿಮೆ ಹೇಳಿದರೆ ಕಡಿಮೆ’ ಎನ್ನುವುದು ಅವರ ವಾದ. ಆದರೆ ಅವರ ಬಾಡಿಗೆ? ಅದು ಗಳಿಕೆಯ ಪ್ರಮಾಣಕ್ಕನುಗುಣವಾಗಿ ಬದಲಾಗುತ್ತದೆ. ಮಲ್ಟಿಪ್ಲೆಕ್ಸ್‌ಗಳಲ್ಲಂತೂ, ಮೊದಲ ವಾರ ಗಳಿಕೆಯ ಪ್ರತಿಶತ ೫೦ ಬಾಡಿಗೆ, ಉಳಿದರ್ಧ ವಿತರಕರಿಗೆ. ವಾರ ಕಳೆದಂತೆ ಪ್ರತಿ ವಾರ ಪ್ರತಿಶತ ೫ರಂತೆ ಪ್ರದರ್ಶಕರ ಬಾಡಿಗೆ ಏರುತ್ತದೆ. ಶೇ.೭೦ ಪ್ರದರ್ಶಕರಿಗೆ ಗರಿಷ್ಟ ಬಾಡಿಗೆ! ಏಕಪರದೆಯ ಚಿತ್ರಮಂದಿರಗಳಿಗೆ ಇಂತಹ ಚಿತ್ರಗಳು ಬಂದಾಗ ಮಾತ್ರ ಪ್ರೇಕ್ಷಕರು ಬರುತ್ತಾರೆ, ಹಾಗಾಗಿ ಮುಚ್ಚಿದ, ಮುಚ್ಚುವ ಯೋಚನೆ ಮಾಡುತ್ತಿರುವ ಪ್ರದರ್ಶಕರು ಈ ಅವಕಾಶವನ್ನು ಬಿಡುವುದಿಲ್ಲ.
‘ಪುಷ್ಪಾ-ದ ರೂಲ್’ ಕರ್ನಾಟಕದಲ್ಲಿ ಸಿನಿಮಾಟೋಗ್ರಫಿ ರೂಲನ್ನು ಮುರಿಯಲು ಹಿಂದಿನ ಪರಭಾಷಾ ಚಿತ್ರಗಳಂತೆ ಪ್ರಯತ್ನವನ್ನೇನೋ ಪಟ್ಟಿತು. ವಾರಕ್ಕೆ ಮೊದಲೇ ಮುಂಗಡ ಬುಕಿಂಗ್ ಕೂಡ ಆರಂಭವಾಯಿತು. ಮೊದಲ ದಿನಗಳಲ್ಲಿ ಬಂದಷ್ಟು ಬಾಚುವ ಲೆಕ್ಕಾಚಾರ. ಅದು ಈ ಚಿತ್ರ ಎಂದಲ್ಲ, ದುಬಾರಿ ನಿರ್ಮಾಣ ವೆಚ್ಚದ ಬಹುತೇಕ ಚಿತ್ರಗಳು ಹಾಗೆಯೇ. ಬೆಳ್ಳಿಮೂಡುವ ಮೊದಲೇ ಮೊದಲ ದಿನಗಳಲ್ಲಿ ಪ್ರದರ್ಶನ. ಮುಂಗಡ ಬುಕಿಂಗ್ ಮಾಡುವ ಅಭಿಮಾನಿಗಳಿಗೂ ಕೊರತೆ ಇಲ್ಲ. ದುಬಾರಿ ಮೊತ್ತ ತೆತ್ತು ಸೂರ್ಯ ಉದಯಿಸುವ ಮೊದಲೇ ಸಿನಿಮಾ ನೋಡಲು ಟಿಕೆಟ್ ಖರೀದಿಸಿದ ಮಂದಿಗೆ ಈ ಬಾರಿ ತಣ್ಣನೆಯ ಆಘಾತ!
ಮೊದಲ ಬಾರಿಗೆ ಜಿಲ್ಲಾಡಳಿತ ಎಚ್ಚೆತ್ತ ಪರಿಣಾಮ ಇದು. ನಿರ್ಮಾಪಕರ ಸಂಘ, ಬೆಂಗಳೂರು ನಗರ ಪೊಲೀಸ್ ಆಯಕ್ತರಿಗೆ ನಿಯಮ ಮೀರಿ ಚಿತ್ರಪ್ರದರ್ಶನ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರುತ್ತದೆ. ನಿರ್ಮಾಪಕರ ಸಂಘ ಎಚ್ಚರವಾದದ್ದು ಮಾಧ್ಯಮಗಳು ಎಚ್ಚರಿಸಿದಾಗಲೇ. ಕರ್ನಾಟಕ ಸಿನಿಮಾಟೋಗ್ರಫಿ ಕಾಯ್ದೆಯನ್ವಯ ಮುಂಜಾನೆ ಎಂಟು ಗಂಟೆಯ ಮೊದಲು ಹಾಗೂ ರಾತ್ರಿ ಹತ್ತು ಗಂಟೆಯ ನಂತರ ಯಾವುದೇ ಚಿತ್ರಮಂದಿರದಲ್ಲಿ ಚಿತ್ರಗಳ ಪ್ರದರ್ಶನ ಆರಂಭಿಸುವಂತಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೆಂಗಳೂರು ನಗರ ಜಿಲ್ಲೆಯ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಸಮಯ ಪಾಲನೆ ಮಾಡದೆ ಅನಽಕೃತವಾಗಿ ಚಲನಚಿತ್ರ ಪ್ರದರ್ಶಿಸುವ ೪೨ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೋಯಿತು. ಕೊನೆಯ ಕ್ಷಣದಲ್ಲಿ ನಿನ್ನೆ ಆ ಪ್ರದರ್ಶನಗಳು ರದ್ದಾದುವೆನ್ನಿ.
ಒಳ್ಳೆಯದೊಂದು ಆರಂಭ ಆಗಿದೆ. ಕನ್ನಡೇತರ ಚಿತ್ರಗಳ ವಿಜೃಂಭಣೆ ಆಗಿನಿಂದಲೂ ಇದೆ. ಈಗ ಅದು ಹೆಚ್ಚತೊಡಗಿದೆ. ಸರ್ಕಾರ ಮತ್ತು ಇಲ್ಲಿನ ಉದ್ಯಮಗಳ ಉದಾಸೀನ ಪ್ರವೃತ್ತಿ ಮತ್ತು ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣ. ಪುಷ್ಪಾ ಚಿತ್ರದ ಮುಂಗಡ ಬುಕಿಂಗ್ ಗಳಿಕೆಯ ವರದಿ ಇದನ್ನು ಸಮರ್ಥಿಸುತ್ತದೆ. ಮೊನ್ನೆ, ಬಿಡುಗಡೆಯ ಮುನ್ನಾದಿನ, ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಕ್ರಮವಾಗಿ ೧೬.೭೫ ಮತ್ತು ೧೬.೯೪ ಕೋಟಿ ರೂ. ಗಳಿಕೆಯಾದರೆ, ಕರ್ನಾಟಕದಲ್ಲಿ ೮.೮೩ ಕೋಟಿ ರೂ. ಗಳಿಕೆ. ತಮಿಳುನಾಡಿನಲ್ಲಿ ೪.೦೫ ಕೋಟಿ ರೂ. ನಗರಗಳಲ್ಲಿ ಹೈದರಾಬಾದ್ ನಲ್ಲಿ ೧,೩೬೮ ಪ್ರದರ್ಶನಗಳಲ್ಲಿ ೧೪.೧೫ ಕೋಟಿ ರೂ. ಗಳಿಕೆಯಾದರೆ, ಬೆಂಗಳೂರಿನಲ್ಲಿ ೧,೦೦೮ ಪ್ರದರ್ಶನಗಳಲ್ಲಿ ೬.೨೨ ಕೋಟಿ ರೂ. ಗಳಿಕೆ! ವಿಶಾಖಪಟ್ಟಣದಲ್ಲಿ ೩೮೬ ಪ್ರದರ್ಶನದಲ್ಲಿ ೨.೬೮ ಕೋಟಿ ರೂ. ಆದರೆ, ಚೆನ್ನೆ ಯಲ್ಲಿ ೬೯.೩೩ ಲಕ್ಷ ರೂ. ಮಾತ್ರ! ಈ ಮೂರೂ ರಾಜ್ಯಗಳಲ್ಲಿ ಪ್ರವೇಶದರಕ್ಕೆ ಸರ್ಕಾರ ಮಿತಿ ಹೇರಿದೆ.
ಮನಸೋ ಇಚ್ಛೆ ಪ್ರವೇಶ ದರ ಏರಿಸುವಂತಿಲ್ಲ. ದುಬಾರಿ ವೆಚ್ಚದ ಚಿತ್ರಗಳ ಬಿಡುಗಡೆಯ ವೇಳೆ ಸರ್ಕಾರದಿಂದ ಅನುಮತಿ ಪಡೆದು ಕೆಲವು ದಿನಗಳ ಮಟ್ಟಿಗೆ ಮಾತ್ರ ಹೆಚ್ಚಿಸಿಕೊಳ್ಳಬಹುದು. ಈ ಚಿತ್ರಕ್ಕೆ ಅಲ್ಲಿನ ಸರ್ಕಾರ ಇಂದಿನಿಂದ ೧೭ನೇ ತಾರೀಕಿನವರೆಗೆ ೩೨೪.೫೦ ಮತ್ತು ೪೧೩ ರೂ. ಪ್ರವೇಶ ದರ (ಜಿಎಸ್‌ಟಿ ಸೇರಿದಂತೆ) ನಿಗದಿಪಡಿಸಲು ಅನುಮತಿ ನೀಡಿದೆ. ಅಷ್ಟೇ ಅಲ್ಲ, ಐದು ಪ್ರದರ್ಶನಗಳಿಗೂ ಅವಕಾಶ ನೀಡಿದೆ. ಉಳಿದಂತೆ ದಿನವಹಿ ನಾಲ್ಕು ಪ್ರದರ್ಶನ. ಚಿತ್ರಮಂದಿರಗಳಲ್ಲಿ ಆಯಾ ಚಿತ್ರಗಳಲ್ಲಿನ ಸೌಲಭ್ಯಗಳಿಗೆ ಅನುಗುಣವಾಗಿ ಪ್ರವೇಶ ದರ ನಿಗದಿ ಮಾಡುವ, ನಿಯಂತ್ರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಮಾತೆತ್ತಿದರೆ, ಕನ್ನಡ ಚಿತ್ರಗಳನ್ನು ಜನ ನೋಡುತ್ತಿಲ್ಲ, ಹಾಗಾಗಿ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂದು ಉಲಿಯುವ ಮಂದಿ ಇತರ ಬೆಳವಣಿಗೆಗಳ ಕುರಿತಂತೆ ಗಮನ ಹರಿಸಿದಂತೆ ಇಲ್ಲ. ಪುಷ್ಪಾ ಚಿತ್ರವನ್ನೇ ತೆಗೆದುಕೊಂಡರೆ, ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಕೆಂಪೇಗೌಡ ರಸ್ತೆಯ ಮೂರು ಚಿತ್ರಮಂದಿರಗಳಲ್ಲಿ ಅದು ಬಿಡುಗಡೆ ಆಗಿದೆ. ಸಾಮಾನ್ಯವಾಗಿ ತೆಲುಗು ಚಿತ್ರಗಳು ಅಲ್ಲಿ ಬಿಡುಗಡೆ ಆಗುತ್ತಿದ್ದುದು ಅಪರೂಪ, ಮೂವೀಲ್ಯಾಂಡ್ ತೆಲುಗು ಚಿತ್ರಗಳಿಗೆ ಸೀಮಿತವಾಗಿತ್ತು. ಸಂತೋಷ್, ಅನುಪಮ ಚಿತ್ರಮಂದಿರಗಳಲ್ಲಿ ಕ್ರಮವಾಗಿ ಈ ಚಿತ್ರದ ಹಿಂದಿ, ಕನ್ನಡ ಡಬ್ ಆವೃತ್ತಿಗಳು ತ್ರಿವೇಣಿ ಚಿತ್ರಮಂದಿರದಲ್ಲಿ ಅದರ ಮೂಲ ತೆಲುಗು ಆವೃತ್ತಿ ಪ್ರದರ್ಶನ. ಕನ್ನಡ ಹೋರಾಟಗಾರರಿಗೆ ಈಗ ಭಾರತದ ಸ್ಪರ್ಧಾ ಆಯೋಗ (ಪಾಂಪಿಟೀಶನ್ ಕಮಿಶನ್ ಆಫ್ ಇಂಡಿಯಾ-ಸಿಸಿಐ)ದ ಭಯ. ಅದನ್ನು ಗುರಾಣಿಯಂತೆ ಬಳಸಲಾಗುತ್ತಿದೆ. ವಿಶ್ವ ವ್ಯಾಪಾರ ಒಪ್ಪಂದ ಮುಕ್ತ ಮಾರುಕಟ್ಟೆಗೆ ಹೊರದಾರಿಯಾದರೂ, ಸಾಂಸ್ಕ ತಿಕ ಸರಕುಗಳು ಅವುಗಳಿಂದ ಹೊರಗಿರಬಹುದು ಎನ್ನುವುದಾಗಿ ಯುನೆಸ್ಕೋದಲ್ಲಿ ಒಪ್ಪಂದವಾಗಿತ್ತು.
ಭಾರತದ ಬಹಳಷ್ಟು ಭಾಷೆಗಳ ಚಿತ್ರರಂಗಗಳು ಹೊಸ ತಂತ್ರಜ್ಞಾನದ ಬೆಳವಣಿಗೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಮುನ್ಸೂಚನೆ ಅಲ್ಲಲ್ಲಿ ಕಾಣಿಸುತ್ತಿದೆ. ಇದು ಇಂತಹ ಚಿತ್ರಗಳ ಬಿಡುಗಡೆಯ ವೇಳೆ ಡಾಳಾಗಿ ಕಾಣುತ್ತದೆ.
ಚಿತ್ರಮಂದಿರಗಳಲ್ಲಿ ಪ್ರವೇಶದರವನ್ನು ಗರಿಷ್ಠ ೨೦೦ ರೂ.ಗಳಿಗೆ ಮಿತಿಗೊಳಿಸಿ ಈ ಹಿಂದೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ನಮ್ಮಲ್ಲಿ, ಸರ್ಕಾರ ಚಾಪೆಯಡಿ ನುಗ್ಗಿದರೆ ಉದ್ಯಮದ ಮಂದಿ ರಂಗೋಲಿ ಕೆಳಗೆ ತೂರುವುದರಲ್ಲಿ ಪ್ರವೀಣರಿದ್ದಾರೆ. ಆದೇಶ ಹೊರಡಿಸಿದ ರೀತಿಯೋ, ಇಲಾಖೆಯೋ ಯಾವುದೋ ಒಂದು ಸರಿ ಇಲ್ಲ ಎಂದು ಅದಕ್ಕೆ ತಡೆಯಾಜ್ಞೆ ತಂದದ್ದಾಯಿತು. ಅದಾಗಿ ವರ್ಷಗಳಾಗಿವೆ, ತಡೆಯಾಜ್ಞೆ ತೆರವುಗೊಳಿಸಿ, ಆಯಾ ಪ್ರದೇಶದಲ್ಲಿರುವ ಚಿತ್ರಮಂದಿರಗಳಲ್ಲಿರುವ ಸೌಲಭ್ಯಗಳಿಗೆ ಅನುಗುಣವಾಗಿ ಪ್ರವೇಶ ದರ ನಿಗದಿ ಪಡಿಸುವ ಕೆಲಸ ಮೊದಲು ಆಗಬೇಕು. ಅಷ್ಟೇ ಅಲ್ಲ, ಸರ್ಕಾರ ಉದ್ಯಮಕ್ಕೆ ನೀಡುವ ಇತರ ಸೌಲಭ್ಯಗಳ ಕುರಿತಂತೆಯೂ ವಿಶೇಷ ಚಿಂತನೆಗಳಾಗಬೇಕು. ಸಿನಿಮಾ ಡಿಜಿಟಲ್‌ಗೆ ಹೊರಳಿದ ನಂತರ ಸಿನಿಮಾ ನಿರ್ಮಾಣ, ಪ್ರದರ್ಶನ, ಪ್ರಸಾರ ಸಾಕಷ್ಟು ಬದಲಾವಣೆಗಳಾಗಿವೆ. ಅದಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸಗಳಾಗಬೇಕು.
ಮಾಹಿತಿತಂತ್ರಜ್ಞಾನಸಿನಿಮಾಮಾಧ್ಯಮಕ್ಕೆಪೂರಕವಾಗಿದೆ. ಕರ್ನಾಟಕವಂತೂಈ ನಿಟ್ಟಿನಲ್ಲಿಇತರರಾಜ್ಯಗಳಿಗಿಂತಸಾಕಷ್ಟುಮುಂದಿದೆ. ಆದರೆಈಕುರಿತಂತೆ ಉದ್ಯಮಕ್ಕೆಸಾಕಷ್ಟುಮಾಹಿತಿಇಲ್ಲ. ಅಂತೆಯೇಪ್ರವಾಸೋದ್ಯಮಇಲಾಖೆ ಪ್ರತ್ಯೇಕಸಹಾಯಧನನೀಡುತ್ತದೆ. ಇವುಗಳಕುರಿತಂತೆಕೂಡಸಾಕಷ್ಟು ಪ್ರಚಾರಆದಂತಿಲ್ಲ. ವಾರ್ತಾಮತ್ತುಸಾರ್ವಜನಿಕಸಂಪರ್ಕಇಲಾಖೆ, ಮಾಹಿತಿತಂತ್ರಜ್ಞಾನ ಇಲಾಖೆಮತ್ತುಪ್ರವಾಸೋದ್ಯಮಇಲಾಖೆಈನಿಟ್ಟಿನಲ್ಲಿ ಒಟ್ಟಿಗೆಸೇರಿಕಾರ್ಯಪ್ರವೃತ್ತಆದರೆಕನ್ನಡಚಿತ್ರೋದ್ಯಮಕ್ಕೆಇನ್ನಷ್ಟು ನೆರವಾಗಬಹುದು
ಚಿತ್ರಮಂದಿರಗಳಲ್ಲಿ ಆಯಾ ಚಿತ್ರಗಳಲ್ಲಿನ ಸೌಲಭ್ಯಗಳಿಗೆ ಅನುಗುಣವಾಗಿ ಪ್ರವೇಶ ದರ ನಿಗದಿ ಮಾಡುವ, ನಿಯಂತ್ರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಮಾತೆತ್ತಿದರೆ, ಕನ್ನಡ ಚಿತ್ರಗಳನ್ನು ಜನ ನೋಡುತ್ತಿಲ್ಲ, ಹಾಗಾಗಿ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂದು ಉಲಿಯುವ ಮಂದಿ ಇತರ ಬೆಳವಣಿಗೆಗಳ ಕುರಿತಂತೆ ಗಮನ ಹರಿಸಿದಂತೆ ಇಲ್ಲ. ಪುಷ್ಪಾ ಚಿತ್ರವನ್ನೇ ತೆಗೆದುಕೊಂಡರೆ, ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಕೆಂಪೇಗೌಡ ರಸ್ತೆಯ ಮೂರು ಚಿತ್ರಮಂದಿರಗಳಲ್ಲಿ ಅದು ಬಿಡುಗಡೆ ಆಗಿದೆ. ಸಾಮಾನ್ಯವಾಗಿ ತೆಲುಗು ಚಿತ್ರಗಳು ಅಲ್ಲಿ ಬಿಡುಗಡೆ ಆಗುತ್ತಿದ್ದುದು ಅಪರೂಪ, ಮೂವೀಲ್ಯಾಂಡ್ ತೆಲುಗು ಚಿತ್ರಗಳಿಗೆ ಸೀಮಿತವಾಗಿತು





