Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಸೀತೆ ಹುಟ್ಟಿದ ದಿನ ಹುಟ್ಟಿದ ನನ್ನ ಲಲಿತೆ

ಬೆ.ಸು.ಲಕ್ಷ್ಮೀನಾರಾಯಣ್

ಇಬ್ಬರೂ ಬೆಳೆದು ಬಂದ ವಾತಾವರಣ ಬೇರೆಯಾಗಿದ್ದರಿಂದ ಒಬ್ಬರಿಗೊಬ್ಬರು ಹೊಂದಿಕೊಳ್ಳುವಾಗ, ಬದುಕಿನ ವಾಸ್ತವ ಇಬ್ಬರಿಗೂ ಒಂದು ರೀತಿಯಲ್ಲಿ ಅರ್ಥವಾಗಲು ಒಂದು-ಒಂದೂವರೆ ವರ್ಷ ಬೇಕಾಯಿತು.

ನನ್ನ ಚಿಕ್ಕ ಕೆಲಸ ಸಂಬಳದ ಪಡುವಟ್ಟಲ್ಲಿ ಸಾಧಾರಣ-ಮಧ್ಯಮ-ವರ್ಗದ ಕುಟುಂಬದ ಆಚರಣೆಗಳನ್ನು, ಹಬ್ಬ, ಹರಿದಿನ, ತಿಥಿಗಳನ್ನು ನಿಭಾಯಿಸುತ್ತ ಮಕ್ಕಳನ್ನೂ ನೋಡಿಕೊಂಡದ್ದು ಲಲಿತಳೆ. ಚಿಕ್ಕ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿದ್ವು. ಕಷ್ಟದ ಬದುಕಿನ ಚಿಂತೆ ಕಾಡದಂತೆ ನಮ್ಮ ಭಜನೆಯ ಹವ್ಯಾಸ, ಸ್ನೇಹಿತರ, ಬಂಧುಗಳ ಸಹವಾಸ ನಮ್ಮನ್ನು ಮುನ್ನಡೆಸಿತು. ಮಕ್ಕಳು ಅವರವರ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಬೆಳೆದರು. ಚನ್ನಾಗಿ ಓದಿ ಒಳ್ಳೆಯ ಕೆಲಸದಲ್ಲಿದ್ದು ಚನ್ನಾಗಿ ಬದುಕುತ್ತಿದ್ದಾರೆ.

ತನ್ನ ತವರಿನಲ್ಲಿ ಒಬ್ಬಳೇ ಮಗಳೆಂದು ಮುಚ್ಚಟೆಯಿಂದ ಬೆಳೆದಿದ್ದ ನಗರದ ನಾಜೂಕುಗಳನ್ನು ನೋಡಿದ್ದ ಈ ವಿದ್ಯಾವಂತ ಹುಡುಗಿ, ನಮ್ಮ ಕೂಡುಕುಟುಂಬದ ಹಳ್ಳಿಮನೆಯಲ್ಲಿ, ಮಡಿಯಾಗಿದ್ದ ನನ್ನ ವಯಸ್ಸಾದ ತಾಯಿಯ ಜೊತೆಯಲ್ಲಿ ಏಗುತ್ತಾಳೋ ಇಲ್ಲವೋ ಎಂದು ಮೊದಲು ಭಯಪಟ್ಟಿದ್ದೆ. ಲಲಿತಾ ಎಲ್ಲ ರೀತಿಯ ಹೊಂದಾಣಿಕೆ ವಾಡಿಕೊಂಡು ನಮ್ಮನ್ನು ಇವತ್ತಿನ ಸುಖವಾದ ಸ್ಥಿತಿಗೆ ತಂದಿದ್ದಾಳೆ. ನನ್ನ ವುಂಸ್ಸಾದ ತಾಯಿುಂನ್ನು ಚೆನ್ನಾಗಿ ನೋಡಿಕೊಂಡಿದ್ದಳು.

ಲಲಿತಳ ತಂದೆ ಅವಳಿಗೆ ನೀನೂ ಸೀತೆ ಹುಟ್ಟಿದ ದಿನ ಹುಟ್ಟಿದವಳು ನಿನಗೆ ಕಷ್ಟದ ಬದುಕು ಎಂದು ಹೇಳಿದ್ದರಂತೆ. ಆ ರೀತಿಯ ತನ್ನ ಮನದ ಭಾರವನ್ನು ತಾನೇ ಹೊತ್ತು, ಹಲ್ಲು ಕಚ್ಚಿ ಬಂದ ಕಷ್ಟಗಳನ್ನು ತಡೆದುಕೊಂಡು, ಮಕ್ಕಳ ಏಳ್ಗೆೆಯೇ ತನ್ನ ಗುರಿ ಎಂದು ಸಂಸಾರವನ್ನು ನಡೆಸಿದಳು. ಆಗೀಗ ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇದ್ದರೂ ಅದು ಸಂಸಾರದ ಹದವನ್ನು ಕೆಡಿಸದ ಹಾಗೆ ನೋಡಿಕೊಂಡಳು. ಬೆಂಕಿಯಲ್ಲಿ ಪುಟವಿಟ್ಟರೆ ಚಿನ್ನ ಹೊಳಪು ಪಡೆಯುವಂತೆ ನಮ್ಮ ಕಷ್ಟಗಳ ಬೆಂಕಿಯಲ್ಲಿ ಹಾದು ಈಗ ನಾವು ಸಂತೋಷದ ಚಿನ್ನವನ್ನು ಧರಿಸಿದ್ದೇವೆ. 52 ವರ್ಷಗಳ ಕಾಲದ ದಾಂಪತ್ಯ ಜೀವನದ ಕಷ್ಟ ಕಾಲವನ್ನು ಲಲಿತ ಹೂಡಿದ ಸಹನೆ ಮತ್ತು ಧಾರಣೆಗಳ ಡೆಪಾಸಿಟ್ಟುಗಳ ಮೂಲಕ ಮುನ್ನಡೆಸಿ ಈಗ ಸಂತಸದ ಚಿನ್ನವನ್ನು ನಗದು ಮಾಡಿಕೊಳ್ಳುವ ಕಾಲದಲ್ಲಿದ್ದೇವೆ. ಈಗ ಮೊಮ್ಮಕ್ಕಳೊಂದಿಗೆ ಅವರು ಹೇಳಿಕೊಟ್ಟ ಉನೋ, ಇಸ್ಪೀಟು ಕಲಿತು, ಅವರಿಗೆ ಪಗಡೆ, ಚನ್ನೆಮಣೆ, ಚೌಕಾಬಾರ ಹೇಳಿಕೊಟ್ಟು ಸಂತೋಷದಿಂದ ಕಾಲ ಕಳೆಯುತ್ತಿದ್ದೇವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!