
ಕಪ್ಪೆ ಅನ್ನುವ ಉಭಯವಾಸಿ ಭೂಮಿಯಲ್ಲಿ ಯಾಕಿದೆ ಎಂದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕಪ್ಪೆ ಅಂದರೆ ಕಪ್ಪೆ ಅಷ್ಟೇ! ಉಭಯವಾಸಿ ಎಂಬ ಉತ್ತರಕ್ಕಿಂತ ಹೆಚ್ಚಿನದ್ದನ್ನು ಹೆಚ್ಚಿನವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಸ್ತುತ ಅಧ್ಯಯನಗಳ ಪ್ರಕಾರ ಕಪ್ಪೆಗಳ ಸಂಖ್ಯೆ ಮತ್ತು ಕಪ್ಪೆಗಳ ಪ್ರಭೇದಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ.
ಕೃಷಿಗೆ ಫಲವತ್ತತೆ ಹೆಚ್ಚಿಸಲು ಬಳಸುತ್ತಿರುವ ರಸಗೊಬ್ಬರಗಳು ಮತ್ತು ಕೀಟನಾಶಕಗಳು, ನಗರ-ಪಟ್ಟಣದಲ್ಲಿ ಉತ್ಪಾದನೆಯಾಗುತ್ತಿರುವ ರಾಸಾಯನಿಕ ಅನಿಲಗಳ ಕಾರಣದಿಂದಾಗಿ ಓಜೋನ್ ಪದರದ ನಾಶ. ಪರಿಣಾಮ ಅತಿನೇರಳೆ ಕಿರಣಗಳು ಭೂಮಿಗೆ ನೇರವಾಗಿ ಬೀಳುತ್ತಿರುವುದು. ಇಷೆಲ್ಲ ಕಾರಣಗಳಿಂದಾಗಿ ಕಪ್ಪೆಗಳ ಅಂಗಾಂಗಗಳು ಅನಾರೋಗ್ಯಕ್ಕೀಡಾಗುತ್ತಾ ಕಡೆಗೆ ಕಪ್ಪೆಗಳ ಸಂತತಿಯೇ ನಾಶದ ಕಡೆಗೆ ಚಲಿಸುತ್ತಿದೆ.
ವಿನಾಶದ ಅಂಚಿನಲ್ಲರಿವ ಕಪ್ಪೆಗಳ ಸಂಬಂಧ ಕರ್ನಾಟಕ ಜೀವವೈವಿಧ್ಯ ಮಂಡಲಿ ಕಳೆದ ವರ್ಷ ಪಟ್ಟಿ ಮಾಡಿ, ಈರಿಡಿಚಿಡಿಥಿಚಿ ಡಿಣ, ಟಿಜಡಿಚಿಟಿಚಿ ಟಿಜಥಿಚಿ, ಟಿಜಡಿಚಿಟಿಚಿ ಠಿಡಿಟಿಜಡಿಚಿ ಎಂಬ ಈ ಮೂರೂ ಪ್ರಬೇಧದ ಕಪ್ಪೆಗಳು ಅಳಿವಿನಂಚಿನಲ್ಲಿವೆ ಎಂದು ಹೇಳಿತ್ತು.
ನಮ್ಮ ಪ್ರಕೃತಿಗೆ ಕಪ್ಪೆಗಳಿಂದ ಆಗುವ ಅನುಕೂಲವಾದರೂ ಏನು? ಕೂಪ ಮಂಡೂಕರಾಗಿರುವ ನಾವುಗಳು, ಬಾವಿಯಿಂದ ಆಚೆಗೆ ಬಂದು, ಅನುಕೂಲಗಳೇನು? ಪ್ರಕೃತಿ ಉಳಿಸಲು ನಾವು ಮಾಡಬೇಕಾದ ಕೆಲಸಗಳೇನು ಎಂಬುದನ್ನು ಆಲೋಚಿಸಬೇಕಿದೆ.ಭೂ ದಿಕ್ಸೂಚಿಯಾಗಿ ಕಪ್ಪೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಎಂಬುದರ ಬಗ್ಗೆ ಮುಂದಿನ ಭಾಗದಲ್ಲಿ ಮಾತನಾಡುತ್ತೇನೆ..
‘ಕಪ್ಪೆಗಳ ಮದುವೆ’ ಎಂಬ ಸುದ್ದಿ ಪ್ರಕಟವಾದಾಗ ಕಪ್ಪೆಗಳ ನೆನಪಾಗುವುದುಂಟು. ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ವಿಮರ್ಶಿಸುವುದನ್ನು ಬಿಟ್ಟರೆ, ನಮಗೆ ಕಪ್ಪೆಗಳ ಕುರಿತು ಏನುಗೊತ್ತಿಲ್ಲ ಮತ್ತು ಆ ಕುರಿತು ಹೆಚ್ಚಿನವರೂ ಕೂಪ ಮಂಡೂಕರೇ!