Mysore
16
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಇಳಿಗಾಲದಲ್ಲಿ ಚಳಿಯ ಕಾಳಜಿ ಇರಲಿ

ಹಿರಿಯರೂ ಸೇರಿದಂತೆ ಬಹಳಷ್ಟು ಜನರಿಗೆ ಚಳಿಗಾಲದ ಅವಧಿ ವರ್ಷದ ಅತ್ಯುತ್ತಮ ಸಮಯವೆನಿಸಿದರೂ ಈ ಅವಧಿಯಲ್ಲಿ ಹಿರಿಯರು ಹೆಚ್ಚು ಜಾಗರೂಕರಾಗಿರಬೇಕಾದದ್ದು ಅನಿವಾರ್ಯ.

ಈ ಸಮಯದಲ್ಲಿ ತಾಪಮಾನ ಅತ್ಯಂತ ಕಡಿಮೆ ಇರುವುದರಿಂದ ಒಣ ಚರ್ಮದ ಸಮಸ್ಯೆ, ಕೀಲು ನೋವಿನಂತಹ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಬಹುದು.

ಚಳಿಗಾಲದಲ್ಲಿ ಮನೆಯಲ್ಲಿನ ಇತರೆ ಸದಸ್ಯರು ಹಿರಿಯರ ಆರೈಕೆಯ ಕಡೆ ಹೆಚ್ಚು ಗಮನಹರಿಸಬೇಕು.

ಹಿರಿಯರ ಆರೈಕೆ ಮುಖ್ಯ: ಚಳಿಗಾಲದಲ್ಲಿ ಮನೆಯ ಒಳಗೆ ಬೆಚ್ಚಗಿನ ವಾತಾವರಣವನ್ನು ಸೃಷ್ಟಿಸಬೇಕು. ವಯಸ್ಸಾದಂತೆ ಕಡಿಮೆ ತಾಪಮಾನವನ್ನು ನಿಭಾಯಿಸುವ ಶಕ್ತಿಯನ್ನು ದೇಹ ಕಳೆದುಕೊಳ್ಳುವುದರಿಂದ ಚಳಿಗಾಲದಲ್ಲಿ ಎಲ್ಲ ಸಮಯದಲ್ಲೂ ಹಿರಿಯರನ್ನು ಬೆಚ್ಚಗಿರಿಸುವುದು ಬಹಳ ಮುಖ್ಯ. ಗಾಳಿ ಮತ್ತು ಚಳಿ ಹೆಚ್ಚು ಇರುವಾಗ ಕಿಟಕಿಗಳು ಮತ್ತು ಬಾಗಿಲುಗಳು ಮುಚ್ಚಿರಬೇಕು. ಅವರು ಸಾಕ್ಸ್, ಸ್ವೆಟರ್‌ಗಳು ಮತ್ತು ಕ್ಯಾಪ್‌ಗಳನ್ನು ಸಮರ್ಪಕವಾಗಿ ಧರಿಸಿರುವಂತೆ ನೋಡಿಕೊಳ್ಳಬೇಕು. ತಾಪಮಾನ ತೀರಾ ಕಡಿಮೆಯಾದರೆ ಕೊಠಡಿಗಳಲ್ಲಿ ಹೀಟರ್ ಗಳನ್ನು ಬಳಸುವುದು ಅಗತ್ಯ.

ದೈನಂದಿನ ವ್ಯಾಯಾಮ ಅತ್ಯಗತ್ಯ : ಚಳಿಗಾಲದಲ್ಲಿ ಹಿರಿಯರು ವಾಯುವಿಹಾರಕ್ಕೆ ಹೋಗುವುದನ್ನು ಆದಷ್ಟು ಕಡಿಮೆ ಮಾಡುವುದರಿಂದ ಅವರಿಗೆ ಮನೆಯೊಳಗೆ ಸರಳ ವ್ಯಾಯಾಮಗಳನ್ನು ಮಾಡಿಸುವುದು, ದೈಹಿಕವಾಗಿ ಅವರು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುವುದು ಅವಶ್ಯ. ಒಂದು ವೇಳೆ ಚಳಿಗಾಲದಲ್ಲಿ ಅವರು ಸುಮ್ಮನೆ ಕುಳಿತು ಅಥವಾ ಮಲಗಿಕೊಂಡು ಕಾಲಹರಣ ಮಾಡಿದರೆ ಅದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವರು ಖಿನ್ನತೆಗೆ ಒಳಗಾಗುವ ಲಕ್ಷಣವೂ ಇರುತ್ತದೆ ಅಥವಾ ಅವರ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ಅವರಿಗೆ ಮನೆಯಲ್ಲಿಯೇ ಸರಳ ವ್ಯಾಯಾಮ ಮಾಡಿಸಬೇಕು. ಇದು ರಕ್ತ ಪರಿಚಲನೆಗೆ ಸಹಕಾರಿಯಾಗುವುದರ ಜತೆಗೆ ಅವರ ದೇಹವನ್ನು ಬೆಚ್ಚಗಿರಿಸುತ್ತದೆ.

ಸಮತೋಲಿತ ಆಹಾರವನ್ನು ನೀಡಬೇಕು: ಚಳಿಗಾಲದಲ್ಲಿ ಹಿರಿಯರು ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುವುದರಿಂದ ಅವರಿಗೆ ಆರೋಗ್ಯಕರ ಆಹಾರ ಅತಿಮುಖ್ಯ. ಅಗತ್ಯ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ನೀಡಬೇಕು. ನಾವು ಗುಣಮಟ್ಟದ ಆಹಾರವನ್ನು ನೀಡಿದಷ್ಟೂ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಅವರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ. ಹಿರಿಯರ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳು, ಬೀಜಗಳು ಮತ್ತು ಬಹುಧಾನ್ಯಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ. ಜತೆಗೆ ಬಿಸಿ ಬಿಸಿಯಾದ ಆಹಾರವನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡುವುದು ಅತಿಮುಖ್ಯ.

ಹಿರಿಯರ ದೇಹವನ್ನು ಹೈಡ್ರೀಕರಿಸುವುದು ಉತ್ತಮ: ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ನೀರನ್ನು ಕುಡಿಯುವುದರಿಂದ ಇದು ದೇಹದಲ್ಲಿ ಅಸಮತೋಲನವನ್ನು ಉಂಟು ಮಾಡುತ್ತದೆ. ಇದು ಅವರ ದೇಹದ ನಿರ್ಜಲೀ ಕರಣಕ್ಕೆ ಕಾರಣವಾಗುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಉತ್ತಮ ಮಾರ್ಗವೆಂದರೆ ತಾಜಾ ಹಣ್ಣಿನ ರಸ, ಸೂಪ್ ಜತೆಗೆ ನೀರಿನಾಂಶ ಹೆಚ್ಚಿರುವ ಆಹಾರ ಪದಾರ್ಥ ಗಳನ್ನು ಸೇವನೆ ಮಾಡುವುದು.

ಔಷಧಿ ಮತ್ತು ತಪಾಸಣೆ ಅಗತ್ಯ : ಹಿರಿಯರು ದುರ್ಬಲರಾಗಿದ್ದರೆ ಮತ್ತು ವಿವಿಧ ಅನಾರೋಗ್ಯದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೆ ಅವರಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಪೂರೈಸುವುದಲ್ಲದೆ, ಅವರು ಆರೋಗ್ಯವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಅದಕ್ಕಾಗಿ ಅವರಿಗೆ ಆಗಾಗ್ಗೆ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಾವು ಚಳಿಗಾಲದ ಮಾಸವನ್ನು ಆನಂದಿಸು ತ್ತೇವೆ ಎಂದು ತಿಳಿದು ಈ ಸಮಯವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಈ ಮಾಸ ಹಿರಿಯರು ಮಾತ್ರವಲ್ಲದೆ ಎಲ್ಲರ ಆರೋಗ್ಯದ ಮೇಲೂ ಗಂಭೀರ ಪರಿಣಾಮವನ್ನು ಬೀರಬಹುದು. ಆದ್ದರಿಂದ ಚಳಿಗಾಲದಲ್ಲಿ ಹಿರಿಯರ ಆರೋಗ್ಯದ ರಕ್ಷಣೆಯ ಜತೆಗೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ.

Tags:
error: Content is protected !!