ಕುಸುಮಾ ಆಯರಹಳ್ಳಿ ಹದಿನಾರು ಎಂಬುದು ನಂಜನಗೂಡು ತಾಲ್ಲೂಕಿನ ಒಂದು ಗ್ರಾಮದ ಹೆಸರು. ಹೊಸಬರಿಗೆ ಇದೇನು ಊರಿಗೆ ನಂಬರಿನ ಹೆಸರಿದೆಯಲ್ಲಾ ಅಂದುಕೊಳ್ಳಬಹುದು. ಆದರೆ ಇದು ಮೂಲದಲ್ಲಿ ಯದುನಾಡು, ಮೈಸೂರಿನ ಯದುವಂಶಸ್ಥರ ಸಾಮ್ರಾಜ್ಯ ಸ್ಥಾಪನೆಯ ಬೇರುಗಳು ಇಲ್ಲಿವೆ. ಆಡುತ್ತಾ ಆಡುತ್ತಾ, ಯದುನಾಡು, ಹದಿನಾಡಾಗಿ, ಹದಿನಾರು …










