ಅನುರಾಧಾ ಪಿ. ಸಾಮಗ ಭಾದ್ರಪದದ ಪೂರ್ಣಚಂದ್ರ ವರ್ಷ ಕಾಲವಲ್ಲವೆಂಬಂತಿದ್ದ ಸ್ವಚ್ಛ ರಾತ್ರಿಯಾಗಸದಲ್ಲಿ ನಗುತ್ತಿದ್ದ. ಏನೇ ಹೇಳು ಶರತ್ಚಂದ್ರನಷ್ಟು ಹೊಳಪು ಇವನಿಗಿಲ್ಲ ಅನಿಸಿತು. ಶರತ್ಚಂದ್ರನಿಗೆ ಇವನಂತೆ ಮೋಡ ಮುಸುಕುವ, ಮಳೆಯ ಗದ್ದಲದಲ್ಲಿ ಅಡಗಬೇಕಾಗುವ ಆತಂಕವಿಲ್ಲ ಮತ್ತು ನಿರಾಳತೆಯಂಥ ಚೆಲುವು ಇನ್ನೊಂದಿಲ್ಲ. ಶರದೃತು ಅಂದಕೂಡಲೇ …