ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ …