ಮೈಸೂರು: ದಸರಾ ಮಹೋತ್ಸವವು ವೈಭವವಾಗಿ ನಡೆಯುವಂತೆಯೇ, ಸಂಪ್ರದಾಯ ಬದ್ಧವಾಗಿಯೂ ಆಚರಿಸಲ್ಪಡುತ್ತದೆ. ರಾಜವಂಶಸ್ಥರ ಖಾಸಗಿ ಸಂಪ್ರದಾಯಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದಾಗಿದ್ದು, ಇದು ಬಹಳ ವೈಶಿಷ್ಟ್ಯಪೂರ್ಣವೂ ಹೌದು. ದಸರಾ ಉತ್ಸವದ ೧೦ನೇ ದಿನ ಅಂದರೆ ವಿಜಯದಶಮಿಯಂದು ಅರಮನೆಯ ಕರಿಕಲ್ಲುತೊಟ್ಟಿ ಆವರಣದಲ್ಲಿ ವಜ್ರಮುಷ್ಟಿ ಕಾಳಗವನ್ನು ಏರ್ಪಾಡು …










