ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆ ಬದಿಯ ಚರಂಡಿಗಳು ಕಟ್ಟಿಕೊಂಡಿದ್ದು, ಚರಂಡಿ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತಿದೆ. ಈ ಚರಂಡಿಗಳನ್ನು ನಿರ್ಮಿಸಿ ಸುಮಾರು 25 ವರ್ಷಗಳೇ ಕಳೆದಿದ್ದು, ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಹೂಳು ತುಂಬಿಕೊಂಡಿವೆ. ಇದರಿಂದಾಗಿ ನೀರು ಚರಂಡಿಯಲ್ಲೇ ನಿಂತು ದುರ್ವಾಸನೆ ಬೀರಲಾರಂಭಿಸಿದೆ. …

