Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ವಿಶ್ವಕಪ್ ಸೆಮೀಸ್‌: ಆಸ್ಟ್ರೇಲಿಯಾಗೆ 213 ರನ್‌ಗಳ ಗುರಿ ನೀಡಿದ ದ.ಆಫ್ರಿಕಾ; ಯಾರಾಗ್ತಾರೆ ಭಾರತಕ್ಕೆ ಎದುರಾಳಿ?

ಇಂದು ( ನವೆಂಬರ್‌ 16 ) ಕೊಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿರುವ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲ್‌ಔಟ್‌ ಆಗಿ ಆಸ್ಟ್ರೇಲಿಯಾಗೆ ಗೆಲ್ಲಲು 213 ರನ್‌ಗಳ ಗುರಿಯನ್ನು ನೀಡಿದೆ.

ಈ ಬಾರಿಯ ಟೂರ್ನಿಯ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಚ್ಚರಿಪಡಿಸಿದ್ದ ಸೌತ್‌ ಆಫ್ರಿಕಾ ಈ ಪಂದ್ಯದಲ್ಲಿ ನಿರೀಕ್ಷಿಸಿದ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದೆ. ತಂಡದ ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ಗಳು ವಿಫಲರಾದ ಕಾರಣ ತಂಡ ದೊಡ್ಡ ಮೊತ್ತ ಪೇರಿಸುವಲ್ಲಿ ಎಡವಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿ ಕಾಕ್‌ 3 ರನ್‌ ಗಳಿಸಿ ಔಟ್‌ ಆದರೆ, ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಪೆವಿಲಿಯನ್‌ ಸೇರಿಕೊಂಡರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಸ್ಸಿ ವಾನ್‌ಡರ್‌ ಡಸನ್‌ 6 ರನ್‌ ಗಳಿಸಿದರು, ಏಡನ್‌ ಮಾರ್ಕ್ರಮ್‌ 10 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಹೀಗೆ ಕೇವಲ 24 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಐದನೇ ವಿಕೆಟ್‌ಗೆ ಜತೆಯಾದ ಹೈನ್‌ರಿಚ್‌ ಕ್ಲಾಸೀನ್‌ ಹಾಗೂ ಡೇವಿಡ್‌ ಮಿಲ್ಲರ್‌ ಆಸರೆಯಾದರು. ಕ್ಲಾಸೀನ್‌ 47 ರನ್‌ ಗಳಿಸಿದರೆ, ಡೇವಿಡ್‌ ಮಿಲ್ಲರ್‌ 101 ರನ್‌ ಗಳಿಸಿ ದಕ್ಷಿಣ ಆಫ್ರಿಕಾವನ್ನು ತೀವ್ರ ಮುಖಭಂಗದಿಂದ ಪಾರು ಮಾಡಿದರು. ಉಳಿದಂತೆ ಮಾರ್ಕೊ ಯಾನ್‌ಸೆನ್‌ ಶೂನ್ಯ, ಗೆರಾಲ್ಡ್‌ ಜೀಟ್ಜ್‌ 19. ಕೇಶವ್‌ ಮಹಾರಾಜ್‌ 4, ಕಗಿಸೊ ರಬಾಡಾ 10 ಮತ್ತು ತಬ್ರೈಜ್‌ ಸಂಶಿ ಔಟ್‌ ಆಗದೇ ಅಜೇಯ 1 ರನ್‌ ಕಲೆಹಾಕಿದರು.

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ ಹಾಗೂ ಪ್ಯಾಟ್‌ ಕಮಿನ್ಸ್‌ ತಲಾ 3 ವಿಕೆಟ್ ಕಬಳಿಸಿದರೆ, ಜೋಶ್‌ ಹೇಜಲ್‌ವುಡ್‌ ಹಾಗೂ ಟ್ರೇವಿಸ್‌ ಹೆಡ್‌ ತಲಾ 2 ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!