Mysore
21
overcast clouds
Light
Dark

ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣಾ ಯೋಜನೆಗೆ ಯುಎಸ್‌ ಮಿಶನ್‌ ಬೆಂಬಲ: ಎರಡು ಸಂಸ್ಥೆಗಳೊಂದಿಗೆ ಮೈಸೂರು ವಿವಿ ಒಡಂಬಡಿಕೆ

ಮೈಸೂರು: ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್ ನ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ US ಮಿಷನ್ ಬೆಂಬಲ ನೀಡಿದೆ. ಈ ಸಂಬಂಧ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಇಂದು ಒಡಂಬಡಿಕೆ ಕಾರ್ಯ‌ ನಡೆಸಲಾಯಿತು.

ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಮೈಸೂರು ವಿವಿ, ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಹಾಗೂ ಷಾ ಫೌಂಡೇಶನ್ ಗಳ ಜೊತೆಗೂಡಿ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣಾ ಕಾರ್ಯ ನಡೆಯಲಿದೆ.

ಪಾರಂಪರಿಕ ಕಟ್ಟಡದ ಸಂರಕ್ಷಣೆ ಕಾರ್ಯಕ್ಕಾಗಿ ನುರಿತ ಪಾರಂಪರಿಕ ತಜ್ಞರು, ಅನುಭವಿಗಳನ್ನು ಒಳಗೊಂಡ ಸಮಿತಿಯನ್ನ ಮೈಸೂರು ವಿವಿ ರಚನೆ ಮಾಡಿದ್ದು, ಸುಮಾರು 5 ರಿಂದ 7 ವರ್ಷಗಳ ಅವಧಿಯಲ್ಲಿ ಸಂರಕ್ಷಣಾ ಕಾರ್ಯ ಮುಗಿಯಲಿದೆ.

ಚೆನ್ನೈನ ಯು ಎಸ್ ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯು ಹಾಡ್ಸಜ್ ನೇತೃತ್ವದ ತಂಡ ಹಾಗೂ ಷಾ ಫೌಂಡೇಶನ್ ನ ಹರೀಶ್ ಮತ್ತು ಬೀನಾ ಅವರನ್ನೊಳಗೊಂಡ ತಂಡದ ಜೊತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್ ಕೆ ಲೋಕನಾಥ್ ಒಡಂಬಡಿಕೆ ಮಾಡಿಕೊಂಡರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ