Mysore
24
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

Union Budget 2024: 40000 ಸಾಮಾನ್ಯ ಬೋಗಿಗಳಿಗೆ ವಂದೇ ಭಾರತ್‌ ಸ್ಪರ್ಷ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಒಂದು ಗಂಟೆ ಕಾಲ ಬಜೆಟ್‌ ಮಂಡಿಸಿದ ವಿತ್ತ ಸಚಿವೆ 40000 ರೈಲ್ವೆ ಬೋಗಿಗಳನ್ನು ವಂದೇ ಭಾರತ್‌ ಬೋಗಿಗಳಾಗಿ ಬದಲಾಯಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಮೆಟ್ರೊ ಮತ್ತು ನಮೋ ಭಾರತ್‌ ಯೋಜನೆಗಳಿಗೆ ಹೊಸ ಶಕ್ತಿ ತುಂಬುವ ಮೂಲಕ ದೇಶದ ಆಶೋತ್ತರಗಳಿಗೆ ರೈಲ್ವೆಯ ಒತ್ತಾಸೆ ದೊರಕಿಸಿಕೊಡಲಾಗುವುದು ಎಂದೂ ಸಹ ತಿಳಿಸಿದರು. ಭಾರತದಲ್ಲಿರುವ ಪ್ರಮುಖ ರೈಲ್ವೆ ಮಾರ್ಗಗಳ ಪೈಕಿ ಇಂಧನ, ಸಿಮೆಂಟ್‌, ಬಂದರು ಸಂಪರ್ಕ, ಹೆಚ್ಚಿನ ಜನಸಂಚಾರ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತೇವೆ, ಸಣ್ಣಪುಟ್ಟ ನಗರಗಳಿಗೂ ಮೆಟ್ರೊ ರೈಲು ವಿಸ್ತರಣೆ ಮಾಡಲಿದ್ದೇವೆ ಎಂದು ಹೇಳಿದರು. 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!