Mysore
20
overcast clouds
Light
Dark

ಹೊಸ ವರ್ಷಾಚರಣೆ ಮುಗಿಸಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುವ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಮೂಲತಃ ಹಾಸನ ನಿವಾಸಿಯಾದ ಸಧ್ಯ ಪಡುವಾರಹಳ್ಳಿಯಲ್ಲಿ ವಾಸಿಸುತ್ತಿದ್ದ ಇಂದ್ರಾಂಣಿ ಎಂಬವರ ಮಗ ಹೃತಿಕ್ ಧರಣಿ(೨೪) ಹಾಗೂ ಮೂಲತಃ ಬೆಟ್ಟದಪುರ ತಾಲ್ಲೂಕು ಕೌನಳ್ಳಿ ನಿವಾಸಿಯಾದ ಸಧ್ಯ ಹಿನಕಲ್‌ನಲ್ಲಿ ವಾಸಿಸುತ್ತಿದ್ದ ಶಕುಂತ ಎಂಬವರ ಮಗ ಕೆ.ಎನ್.ಸಂಪತ್(೧೯) ಎಂಬವರೇ ಅಪಘಾತದಲ್ಲಿ ಮೃತಪಟ್ಟವರು.

ಹೃತಿಕ್ ಹಾಗೂ ಸಂಪತ್ ಎಂಬವರು ನಗರದ ಹುಣಸೂರು ರಸ್ತೆಯಲ್ಲರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದರು. ಹೊಸ ವರ್ಷಾಚರಣೆ ಸಂಬಂದ ಇಬ್ಬರೂ ಕೂಡ ಭಾನುವಾರ ನಗರದೆಲ್ಲೆಡೆ ರಾತ್ರಿ ೨ ಗಂಟೆ ವರೆಗೂ ಸುತ್ತಾಡಿದ್ದಾರೆ.

ಅಂತಿಮವಾಗಿ ರಾತ್ರಿ ೩ ಗಂಟೆ ವೇಳೆಯಲ್ಲಿ ಮನೆಗೆ ತೆರಳಲು ತೀರ್ಮಾನಿಸಿದ್ದಾರೆ. ಸಂಪತ್ ಮನೆ ಹಿನಕಲ್‌ನಲ್ಲಿ ಇದ್ದ ಕಾರಣ ಆತನನ್ನು ಮನೆಗೆ ಬಿಡಲು ಹೃತಿಕ್ ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಇದೇ ವೇಳೆ ಜೆಸಿ ಕಾಲೆಜಿಗೆ ತೆರಳುವ ರಸ್ತೆಯ ತಿರುವಿನಲ್ಲಿ ವೇಗವಾಗಿ ಬಂದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆ.

ಇದರಿಂದ ಇಬ್ಬರಿಗೂ ತಲೆಯ ಭಾಗಕ್ಕೆ ತೀವ್ರ ಪೆಟ್ಟಾದ ಕಾರಣ ಇಬ್ಬರು ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಚಾರ ತಿಳಿದ ವಿವಿಪುರಂ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಲವ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕೆಆರ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

ಹೃತಿಕ್ ಅವರ ತಂದೆ ಮೃತಪಟ್ಟಿದ್ದು, ತಾಯಿ ಇಂದ್ರಾಣಿ ಅವರು ಶಿಕ್ಷಿಕಿಯಾ ಗಿದ್ದಾರೆ. ಮಗನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಓದಿಸುತ್ತಿದ್ದರ

ಇನ್ನು ಸಂಪತ್ ತಂದೆ ಕೂಡ ಮೃತಪಟ್ಟಿದ್ದು, ಆತನ ತಾಯಿ ಶಕುಂತಲ ಅವರು ಊರಿನಲ್ಲಿ ಇದ್ದುಕೊಂಡೇ ಮಗನ ವಿದ್ಯಾಭ್ಸಾಸಕ್ಕೆ ನೆರವಾಗಿದ್ದರು.

ಕುಟುಂಬಸ್ತರ ಆಕ್ರಂದನ: ಹೃತಿಕ್ ಹಾಗೂ ಸಂಪತ್ ಅವರ ಸಾವಿನ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ತರ ಆಕ್ರಂದನ ಮುಗಿಲುಮುಟ್ಟಿತು.ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಕೂಡ ಆಗಮಿಸಿ ಸ್ನೇಹಿತರ ಸಾವಿಗೆ ಮಮ್ಮಲ ಮರುಗಿದರು. ಈ ಸಂಬಂದ ವಿವಿಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ