ಬೆಂಗಳೂರು: ರಾಜ್ಯ ಸರಕಾರ ಶುಕ್ರವಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮುಲೈ ಮುಹಿಲನ್ ಎಂಪಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ, ಜಿಲ್ಲಾಧಿಕಾರಿಯಾಗಿದ್ದ ರವಿ ಕುಮಾರ್ ಎಂ.ಆರ್. ಅವರ ಸ್ಥಾನವನ್ನು ಬದಲಾಯಿಸಲಾಗಿದೆ.
ಮುಲೈ ಮುಹಿಲನ್ ಎಂಪಿ ಅವರು ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು, ಇವರು 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ. ರವಿಕುಮಾರ್ ಎಂ ಆರ್ ಅವರು 2022, ಅಕ್ಟೋಬರ್ 31 ರಂದು ದಕ್ಷಿಣ ಕನ್ನಡದ ಡಿಸಿ ಸ್ಥಾನವನ್ನು ವಹಿಸಿಕೊಂಡಿದ್ದರು.
ಮತ್ತೊಂದು ಗಮನಾರ್ಹವಾದ ಆಡಳಿತಾತ್ಮಕ ಬದಲಾವಣೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಡಾ.ಕುಮಾರ್ ಅವರು ಫೆಬ್ರವರಿ 19, 2021 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ವರ್ಗಾವಣೆಗೊಂಡ ಅಧಿಕಾರಿಗಳು
ಪಲ್ಲವಿ ಆಕುರಾತಿ-ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
ಡಾ. ವೆಂಕಟೇಶ್ ಎಂ.ವಿ.- ಆಯುಕ್ತ, ಪಶುಸಂಗೋಪನಾ ಇಲಾಖೆ
ರವೀಂದ್ರ ಪಿ.ಎನ್.- ಡಿಸಿ ಚಿಕ್ಕಬಳ್ಳಾಪುರ
ಶ್ರೀನಿವಾಸ್ ಕೆ.-ಡಿಸಿ ತುಮಕೂರು
ಜಾನಕಿ ಕೆ.ಎಂ.-ಡಿಸಿ ಬಾಗಲಕೋಟೆ
ಮುಲ್ಲೈ ಮುಹಿಲನ್ – ಡಿಸಿ ದಕ್ಷಿಣ ಕನ್ನಡ
ಯೋಗೇಶ್ ಎ.ಎಂ.- ಆಯುಕ್ತ, ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಡಾ. ಕುಮಾರ, ಡಿಸಿ ಮಂಡ್ಯ
ಪ್ರಭು ಜಿ.-ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ನವೀನ್ ಕುಮಾರ್ ರಾಜು, ಇಡಿ ವಸತಿ ಶಿಕ್ಷಣ ಸೊಸೈಟಿ