Mysore
16
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ನಂಜನಗೂಡಿನಲ್ಲಿ ನರಭಕ್ಷಕ ಹುಲಿಗೆ ಮಹಿಳೆ ಬಲಿ

ಇಂದು ( ನವೆಂಬರ್‌ 24 ) ಬೆಳಗ್ಗೆಯಷ್ಟೇ ನಂಜನಗೂಡಿನ ಸುತ್ತಮುತ್ತ ಹುಲಿ ಓಡಾಡಿದೆ ಎಂಬ ಸುದ್ದಿ ಅಲ್ಲಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಈ ಆತಂಕದಲ್ಲಿಯೇ ದಿನಚರಿ ಆರಂಭಿಸಿದ್ದ ಜನತೆಗೆ ಇದೀಗ ಮಹಿಳೆಯೊಬ್ಬರು ಹುಲಿ ದಾಳಿಗೆ ಬಲಿಯಾದ ಸುದ್ದಿ ಮತ್ತಷ್ಟು ಚಿಂತೆಯನ್ನು ತಂದೊಡ್ಡಿದೆ.

ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರತ್ಮಮ್ಮ ಎಂಬ ಮಹಿಳೆ ಹುಲಿ ದಾಳಿಗೆ ಸಿಲುಕಿ ಅಸು ನೀಗಿದ್ದಾರೆ. ಹುಲಿ ದಾಳಿಯ ತೀವ್ರತೆ ದೊಡ್ಡ ಮಟ್ಟದಲ್ಲಿದ್ದು ಮೃತ ಮಹಿಳೆಯ ಎಡ ಕಾಲನ್ನು ಹುಲಿ ಅರ್ಧದಷ್ಟು ತಿಂದು ಹಾಕಿದೆ.

ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ಹೊತ್ತೊಯ್ದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ಈ ದುರ್ಘಟನೆ ನಡೆದಿದೆ. ನರಭಕ್ಷಕ ಹುಲಿಗೆ ಬಲಿಯಾದ ರತ್ನಮ್ಮಳ ಮೃತದೇಹವನ್ನು ಅರಣ್ಯಾಧಿಕಾರಿಗಳಾದ ಪರಮೇಶ್ವರ ಹಾಗೂ ಎ ಟಿ ನಾರಾಯಣರ ತಂಡ ಪತ್ತೆ ಹಚ್ಚಿದೆ. ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೂ ಸಹ ಹುಲಿ ದಾಳಿ ನಡೆಸಿತ್ತು. ಹೀಗೆ ಈ ಹಿಂದೆ ಹುಲಿ ದಾಳಿ ನಡೆದಿದ್ದರೂ ಅದನ್ನು ಹಿಡಿಯದ ಅರಣ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!