Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ತನ್ನ ಸಿದ್ಧಾಂತಕ್ಕೆ ದ್ರೋಹ ಮಾಡುವವರು ನನ್ನ ಫೋಟೋವನ್ನು ಬಳಸಬಾರದು: ಶರದ್ ಪವಾರ್ ಸೂಚನೆ

ಮುಂಬೈ: ತನ್ನ ಸಿದ್ಧಾಂತಕ್ಕೆ “ದ್ರೋಹ” ಮಾಡುವವರು ನನ್ನ ಫೋಟೋವನ್ನು ಬಳಸಬಾರದು ಎಂದು ಎನ್ ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ಮುಂಬೈ: ತನ್ನ ಸಿದ್ಧಾಂತಕ್ಕೆ “ದ್ರೋಹ” ಮಾಡುವವರು ನನ್ನ ಫೋಟೋವನ್ನು ಬಳಸಬಾರದು ಎಂದು ಎನ್ ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷಯಾಗಿದ್ದು, ಜಯಂತ್ ಪಾಟೀಲ್ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಮಾತ್ರ ನನ್ನ ಫೋಟೋ ಬಳಸಬಹುದು ಎಂದರು.  ಮಂಗಳವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷಯಾಗಿದ್ದು, ಜಯಂತ್ ಪಾಟೀಲ್ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಮಾತ್ರ ನನ್ನ ಫೋಟೋ ಬಳಸಬಹುದು ಎಂದರು.

ತಮ್ಮ ಜೀವಿತಾವಧಿಯಲ್ಲಿ ಯಾರು ಫೋಟೋ  ಬಳಸಬೇಕು ಎಂಬುದನ್ನು ನಿರ್ಧರಿಸುವುದು ತನ್ನ ವಿಶೇಷಾಧಿಕಾರವಾಗಿದೆ. “ನನ್ನ ಸಿದ್ಧಾಂತಕ್ಕೆ ದ್ರೋಹ ಮಾಡಿದವರು ಮತ್ತು ನನ್ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರು .ಯಾವುದೇ ಕಾರಣಕ್ಕೂ ತನ್ನ ಫೋಟೋ  ಬಳಸುವಂತಿಲ್ಲ ಎಂದು ಅವರು ಹೇಳಿದರು.

ಪವಾರ್ ಅವರ ಸಂಬಂಧಿ ಅಜಿತ್ ಪವಾರ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಇತರ ಎಂಟು ಶಾಸಕರು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಸೇರಿದ ಎರಡು ದಿನಗಳ ನಂತರ ಪವಾರ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಅಜಿತ್‌ ಪವಾರ್‌ ಬಣ ಜಯಂತ್‌ ಪಾಟೀಲ್‌ ಅವರನ್ನು ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಮತ್ತೊಂದೆಡೆ ಪಾಟೀಲ್ ಅವರು ಅಜಿತ್ ಮತ್ತು ಅವರ ಸಹಚರರನ್ನು ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!