Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಂಸತ್‌ಗೆ ನುಗ್ಗಿದ ಮೈಸೂರು ಯುವಕನ ತಂದೆ ಹೇಳಿದ್ದೇನು?

 2001 ರ ಸಂಸತ್ ದಾಳಿಯ ವಾರ್ಷಿಕೋತ್ಸವದಂದು ಇಬ್ಬರು ವ್ಯಕ್ತಿಗಳು ಸದನದ ಒಳಗೆ ಓಡಿ ಹಳದಿ ಅನಿಲವನ್ನು ಸಿಂಪಡಿಸಿ ಭಯವನ್ನು ಹರಡಿದ ಆಘಾತಕಾರಿ ಘಟನೆ ನಡೆದಿದೆ.

ಮೈಸೂರಿನ ಮನೋರಂಜನ್ ಎಂಬುವವನು ಸಂಸತ್ ಒಳಗೆ ನುಗ್ಗಿದವನು ಎಂದು ಹೇಳಲಾಗುತ್ತಿದೆ.

ಇನ್ನೂ ಮೈಸೂರಿನಲ್ಲಿರುವ ಮನೋರಂಜನ್ ತಂದೆ ಗೆ ಈ ಬಗ್ಗೆ ಕೇಳಿದಾಗ ‘ನಮಗೆ ಈ ವಿಷಯದ ಬಗ್ಗೆ ಗೊತ್ತಿಲ್ಲ. ಅವನು 2014 ರಿಂದ ಬೆಂಗಳೂರು, ದೆಹಲಿ ಕಡೆಗಳಲ್ಲಿ ಕೆಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ.ಅವನ ಮೈಂಡ್ ಸೆಟ್ ಹೇಗಿತ್ತು ಅಂದರೆ ಅವನು ಯಾರ ಕೈಕೆಳಗೂ ಕೆಲಸ ಮಾಡುವವನಲ್ಲ.

ತನ್ನ ಸ್ವಯಾರ್ಜಿತವಾಗಿ ಬದುಕಬೇಕು ಎಂಬ ಮೈಂಡ್ ಸೆಟ್ ಬೆಳೆಸಿಕೊಂಡಿದ್ದನು.ಅದು ಬಿಟ್ಟರೆ ಅವನ ಹತ್ರ ಯಾವುದೆ ಕೆಟ್ಟದ್ದು ಇಲ್ಲ.ಅವನ ಹತ್ತಿರ ಇರುವುದು ಒಂದು ಹಳೇ ಟಿ ಶರ್ಟ್,ಹಳೆ ಚಡ್ಡಿ ಹಳೆ ಚಪ್ಪಲಿ ಬಿಟ್ಟರೆ ಏನೂ ಇಲ್ಲ” ಎಂದು ಅವರ ತಂದೆ ಹೇಳಿದ್ದಾರೆ.ಅವನು ದೆಹಲಿಗೆ ಹೋಗಿದ್ದರ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ