Mysore
22
scattered clouds

Social Media

ಸೋಮವಾರ, 29 ಜೂನ್ 2026
Light
Dark

ಸಲಾರ್‌ ಚಿತ್ರದ ಮೊದಲ ಹಾಡು ಇಂದು ಬಿಡುಗಡೆ

ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೋಡಿಬಂದಿರುವ ಸಲಾರ್ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.

ಇಂದು ಸಿನಿಮಾದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಲಾರ್ ಇಬ್ಬರು ಸ್ನೇಹಿತರ ನಡುವಿನ ಕತೆಯಾಗಿದೆ. ಹೀಗಾಗಿ ಈ ಹಾಡು ಕೂಡಾ ಸ್ನೇಹಿತರಿಬ್ಬರ ಕುರಿತಾಗಿದೆ.

ಡಿಸೆಂಬರ್ 22 ರಂದು ಸಲಾರ್ ಪಾರ್ಟ್ 1 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಗೆ ಭಾರೀ ಬೇಡಿಕೆ ಬಂದಿದೆ.

ಕೆಜಿಎಫ್ ನಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ರವಿ ಬಸ್ರೂರು ಮತ್ತೊಮ್ಮೆ ಇಲ್ಲಿ ತಮ್ಮ ಮ್ಯಾಜಿಕ್ ಮಾಡಲಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಹಾಡು ಬಿಡುಗಡೆಯಾಗಲಿದೆ. ‘ಆಕಾಶ ಗಡಿಯ’ ಎಂದು ಆರಂಭವಾಗುವ ಸಾಲಿನ ಹಾಡು ಇದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!