Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ತಮಿಳುನಾಡು| ರೈಲು ಕಂಪಾರ್ಟ್‌ಮೆಂಟ್ ನಲ್ಲಿ ಬೆಂಕಿ: 9 ಮಂದಿ ಸಾವು

ತಮಿಳುನಾಡು : ಮಧುರೈ ರೈಲು ನಿಲ್ದಾಣದಲ್ಲಿ ಇಂದು ಮುಂಜಾನೆ ನಿಂತಿದ್ದ ರೈಲು ಬೋಗಿಯಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲಿನಲ್ಲಿದ್ದ “ಅಕ್ರಮ ಗ್ಯಾಸ್ ಸಿಲಿಂಡರ್” ಬೆಂಕಿಗೆ ಕಾರಣವಾಯಿತು ಎಂದು ದಕ್ಷಿಣ ರೈಲ್ವೆ ಹೇಳಿದೆ. “ಖಾಸಗಿ ಪಾರ್ಟಿ ಕೋಚ್” ನ ಪ್ರಯಾಣಿಕರು ಉತ್ತರ ಪ್ರದೇಶದ ಲಕ್ನೋದಿಂದ ಆಗಮಿಸಿದ್ದರು.

ಮದುರೈ ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ ಅವರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದು, ರೈಲು ಕಂಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 20 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದರು.

ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ತೊಡಗಿದ್ದು, ಸುಟ್ಟ ದೇಹಗಳನ್ನು ಕಂಪಾರ್ಟ್ಮೆಂಟ್ನಿಂದ ಹೊರತೆಗೆದರು.

ಇಂದು ಮುಂಜಾನೆ 5:15 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಯ ನಂತರ 7:15 ರ ವೇಳೆಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

“ಇದು ಖಾಸಗಿ ಪಾರ್ಟಿ ಕೋಚ್ ಆಗಿದ್ದು, ನಿನ್ನೆ (ಆ. 25) ನಾಗರ್ ಕೋಯಿಲ್ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 16730 (ಪುನಲೂರ್-ಮಧುರೈ ಎಕ್ಸ್ಪ್ರೆ ಸ್) ಗೆ ಜೋಡಿಸಲಾಗಿತ್ತು. ನಂತರ ಪಾರ್ಟಿ ಕೋಚ್ ಅನ್ನು ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್ ನಲ್ಲಿ ಇರಿಸಲಾಗಿತ್ತು. ಖಾಸಗಿ ಪಾರ್ಟಿ ಕೋಚ್ ನಲ್ಲಿನ ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಅನೇಕ ಪ್ರಯಾಣಿಕರು ಕೋಚ್ ನಿಂದ ಹೊರಬಂದಿದ್ದಾರೆ. ಕೆಲವು ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿಯೇ ಇಳಿದಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.

ಪಾರ್ಟಿ ಕೋಚ್ ಆಗಸ್ಟ್ 17 ರಂದು ಲಕ್ನೋದಿಂದ ಪ್ರಯಾಣವನ್ನು ಆರಂಭಿಸಿದೆ. ಪ್ರಯಾಣಿಕರು ನಾಳೆ ಚೆನ್ನೈಗೆ ಹಿಂತಿರುಗಲು ನಿರ್ಧರಿಸಿದ್ದಾರೆ … ಅಲ್ಲಿಂದ ಲಕ್ನೋಗೆ ಹಿಂತಿರುಗುತ್ತಾರೆ” ಎಂದು ಪ್ರಕಟಣೆ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ