Mysore
22
mist

Social Media

ಸೋಮವಾರ, 28 ಅಕ್ಟೋಬರ್ 2024
Light
Dark

ವಿರೋಧದ ನಡುವೆಯೂ ಬೆಂ – ಮೈ ಹೆದ್ದಾರಿಯಲ್ಲಿ ಎರಡನೇ ಹಂತದ ಶುಲ್ಕ ಸಂಗ್ರಹ

ಶ್ರೀರಂಗಪಟ್ಟಣ : ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯರ ವಿರೋಧದ ನಡುವೆಯೂ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಎರಡನೇ ಹಂತದ ಶುಲ್ಕ ಸಂಗ್ರಹ ಗಣಂಗೂರು ಟೋಲ್ ನಲ್ಲಿ ಶನಿವಾರ ಬೆಳಿಗ್ಗೆ ಯಿಂದ ಆರಂಭವಾಯಿತು.
ಟೋಲ್‌ ಸಂಗ್ರಹ ಏಜೆನ್ಸಿಯಾದ ಮುಂಬೈನ ಇಂದರ್‌ದೀಪ್‌ ಕನ್‌ಸ್ಟ್ರಕ್ಷನ್‌ ಕಂಪೆನಿಯ ಸಿಬ್ಬಂದಿಗಳು ಟೋಲ್ ನಲ್ಲಿ ವಾಹನ ಸವಾರರಿಂದ ಶುಲ್ಕ ಸಂಗ್ರಹ ಮಾಡಿದರು.

ಗಣಂಗೂರು ಟೋಲ್ ನಲ್ಲಿಯು ಶುಲ್ಕ ಸಂಗ್ರಹ ಮುಂದಾಗಿರೋದಕ್ಕೆ ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಾಗಲೇ ಒಂದು ಟೋಲ್ ಗೆ ಕಟ್ಟುತ್ತಿರುವ ಶುಲ್ಕ ಹೊರೆ ಬೀಳುತ್ತಿದೆ. ಸರ್ವಿಸ್ ರಸ್ತೆಯೆ ಸರಿಯಾಗಿ ಇಲ್ಲ. ಈ ಹೊತ್ತಿನಲ್ಲಿ ಟೋಲ್ ಶುಲ್ಕ ವಸೂಲಿ ಸರಿಯಲ್ಲ ಎಂದು ಜನರು ಕಿಡಿಕಾರಿದ್ದಾರೆ.

ಕನ್ನಡಪರ ಸಂಘಟನೆ ಕಾರ್ಯಕರ್ತರು ಟೋಲ್ ಬಳಿ ಜಮಾಯಿಸಿ ಸರ್ವೀಸ್‌ ರಸ್ತೆ ಪೂರ್ಣಗೊಳಿಸದೇ, ಮೂಲ ಸೌಲಭ್ಯ ಒದಗಿಸದೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಗಣಂಗೂರು ಟೋಲ್‌ನಲ್ಲಿ ಶುಲ್ಕ ಸಂಗ್ರಹಿಸಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ಶುಲ್ಕ ಸಂಗ್ರಹ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು. ನಿನ್ನೆಯಷ್ಟೇ, ಶಾಸಕರಾದ ದಿನೇಶ್‌ ಗೂಳಿಗೌಡ, ರವಿಕುಮಾರ್‌ ಗಣಿಗ, ರಮೇಶ್‌ ಬಂಡಿಸಿದ್ದೇಗೌಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, ಸರ್ವಿಸ್ ರಸ್ತೆಗಳು, ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಕೊರಿದ್ದರು, ಆದರೂ ಸಹ ಟೋಲ್ ನಲ್ಲಿ ಶುಲ್ಕ ವಸೂಲಿ ಆರಂಭಗೊಂಡಿದೆ.ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು,ಶುಲ್ಕ ಸಂಗ್ರಹಕ್ಕೆ ಅಡೆತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ,

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ