Mysore
22
overcast clouds
Light
Dark

ಸನಾತನ ಧರ್ಮವನ್ನು ಹೆಚ್‌ಐವಿ, ಕುಷ್ಠರೋಗಕ್ಕೆ ಹೋಲಿಸಬೇಕು: ಡಿಎಂಕೆ ಸಂಸದ ಎ.ರಾಜಾ

ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಅವರು ಸನಾತನ ಧರ್ಮ ಕುರಿತು ನೀಡಿರುವ ಹೇಳಿಕೆಯನ್ನು ಸಮರ್ಥಿಸಿದ ಡಿಎಂಕೆ ಸಂಸದ ಎ. ರಾಜಾ ಅವರು ‘ಸನಾತನ ಧರ್ಮ’ವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕವನ್ನು ಹೊಂದಿರುವ ರೋಗಗಳಿಗೆ ಹೋಲಿಸಬೇಕು ಎಂದು ಹೇಳಿದ್ದಾರೆ.

‘ಸನಾತನ ಧರ್ಮ’ದ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಮೃದು ಧೋರಣೆಯನ್ನು ಹೊಂದಿದ್ದವು ಎಂದು ಹೇಳಿದ ರಾಜಾ, “ಸನಾತನ ಮತ್ತು ವಿಶ್ವಕರ್ಮ ಯೋಜನೆ ಬೇರೆ ಬೇರೆ ಅಲ್ಲ, ಎರಡೂ ಒಂದೇ. ಸನಾತನವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಪ್ರತಿಪಾದಿಸುವಾಗ ಉದಯನಿಧಿ ಸ್ಟಾಲಿನ್ ಮೃದು ಧೋರಣೆ ತೋರಿದ್ದರು” ಎಂದು ಹೇಳಿದರು.

“ಆದರೆ ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸನಾತನವನ್ನು ಹೆಚ್‌ಐವಿ ಹಾಗೂ ಕುಷ್ಠರೋಗವನ್ನು ಅಸಹ್ಯಕರವಾಗಿ ನೋಡುವ ಹಾಗೆ ನೋಡಬೇಕು” ಎಂದು ರಾಜಾ ಹೇಳಿದ್ದಾರೆ.

ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧ ನೀವು ಯಾರನ್ನು ಬೇಕಾದರೂ ಕರೆ ತನ್ನಿ ಎಂದು ಸವಾಲು ಹಾಕಿದ ರಾಜಾ, ಅವರು ಯಾವುದೇ ರೀತಿಯ ಆಯುಧಗಳನ್ನು ಹೊಂದಲಿ, ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ನಾನು ದೆಹಲಿಗೆ ಚರ್ಚೆಗೆ ಬರುತ್ತೇನೆ ಎಂದು ಹೇಳಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ