ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪವಿತ್ರಾ ಗೌಡ ವಿಚಾರಣಾಧೀನ ಕೈದಿ ನಂ. 6024

ಬೆಂಗಳೂರು: ಚಿತ್ರದರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ ಸಂಗಾತಿ ಪವಿತ್ರಾಗೌಡ ಅವರಿಗೆ ಯುಟಿಪಿ ನಂಬರ್‌ ನೀಡಲಾಗಿದೆ.

ಅವರಿಗೆ ಡಿ ಬಾರಕ್‌ನಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ 6024 ನಂಬರ್‌ನ್ನು ನೀಡಿದ್ದಾರೆ. ಪವಿತ್ರಾ ಗೌಡ ಜತೆ ಪವನ್‌, ರಾಘವೇಂದ್ರ, ಹಾಗೂ ನಂದೀಶ್‌ ಅವರು ಸಹಾ ಜೈಲು ವಾಸದಲ್ಲಿದ್ದಾರೆ.

ಡಿ ಬಾರಕ್‌ನಲ್ಲಿ ಪವಿತ್ರಾ ಗೌಡ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸಹಾ ಮಾಡಲಾಗಿದೆ. ಸಖತ್‌ ಲೈಫ್‌ಸ್ಟೈಲ್‌ ಲೀಡ್‌ ಮಾಡುತ್ತಿದ್ದ ಪವಿತ್ರಾ ಗೌಡ ಅವರು ಇಂದು ಜೈಲಿನಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.

ವಿಶೇಷವೆಂಬಂತೆ ಪವಿತ್ರಾ ಗೌಡ ಅವರಿಗೆ ʼಡಿʼ ಬಾರಕ್‌ ನೀಡಲಾಗಿದ್ದು, ಅಲ್ಲಿಯೂ ಸಹಾ ದರ್ಶನ್‌ ಹೆಸರಿನ ಡಿ ಪವಿತ್ರಾ ಗೌಡ ಅವರನ್ನು ಬಿಟ್ಟುಬಿಡದೇ ಕಾಡುತ್ತಿದೆ.