ನವದೆಹಲಿ : ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸೆಪ್ಟೆಂಬರ್ 18ರಿಂದ 22 ರ ತನಕ ನಿಗದಿಪಡಿಸಲಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಬಹುದು ಎಂದು ವರದಿಯಾಗಿದೆ.
ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಬೇಕೆಂಬ ಆಗ್ರಹ ತೀವ್ರಗೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಇಂಡಿಯಾದ ಬದಲು ಭಾರತ್ ಎಂಬ ಪದದ ಬಳಕೆಯನ್ನು ಚರ್ಚಿಸುವಾಗ,ನಮ್ಮ ರಾಷ್ಟ್ರದ ಹೆಸರು ಶತಮಾನಗಳಿಂದ ಭಾರತವಾಗಿದೆ, ಇಂಡಿಯಾವಲ್ಲ ಎಂದು ಹೇಳಿದ್ದರು.ಇಂಡಿಯಾ ಎನ್ನುವ ಬದಲು ಭಾರತ ಎಂಬ ಹಳೆಯ ಹೆಸರನ್ನು ದೇಶಕ್ಕೆ ಬಳಸುವಂತೆ ಭಾಗವತ್ ಮನವಿ ಮಾಡಿದ್ದರು.