Mysore
28
clear sky

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಮೂಲಕ ಹೋರಾಟ ನಡೆಸುತ್ತೇವೆ : ಹೆಚ್‌.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ !

ಬೆಂಗಳೂರು : ನಾನೆಲ್ಲೂ ಹೋಗಿಲ್ಲ ಇಲ್ಲೇ ಇದ್ದೀನಿ ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಹೆಚ್‌.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಅವರ ಮೇಲೆ ಕೇಳಿ ಬಂದಿರುವ ಆರೋಪದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿದ್ದಾರೆ. ನಾನು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೇನೆ. ನಾವು ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇವೆ ಎಂದರು.

ಇದೇನು ಮೊದಲಲ್ಲ, ಕಳೆದ ೪೦ ವರ್ಷದಿಂದ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್‌ ಪಕ್ಷ  ಸಿಒಡಿ, ಲೋಕಾಯುಕ್ತ ಸೇರಿದಂತೆ ಅನೇಕ ತನಿಖೆಗಳನ್ನು ಎದುರಿಸಿಕೊಂಡು ಬಂದಿದ್ದೇವೆ ಎಂದರು.

ಕಾಂಗ್ರೆಸ್‌ ಪಕ್ಷದ ಆರೋಪಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರ ಅವರದ್ದೇ ಇದೆ, ಎಸ್‌ಐಟಿ ತನಿಖೆಗೆ ಆದೇಶ ಮಾಡಿದ್ದಾರೆ. ಅವರು ಏನು ಬೇಕಾದರು ಮಾಡಲಿ. ಕಾನೂನು ರೀತಿ ಏನು ಬೇಕಾದರು ಕ್ರಮ ಕೈಗೊಳ್ಳಲಿ ಎಂದರು.

ಎಸ್‌ಐಟಿ ತನಿಖೆಯೆ ಯಾವುದೇ ರೀತಿಯ ಮುಜುಗರವಾಗಬಾರದು ಎಂಬ ಉದ್ದೇಶದಿಂದ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.

ತನಿಖೆಗೆ ಕರೆದಾಗ ಬರುತ್ತಾನೆ: ಎಫ್‌ಐಆರ್‌ ಮಾಡುತ್ತಾರೆ ಅಂತಾ ಪ್ರಜ್ವಲ್‌ಗೆನಾದರು ಗೊತ್ತಿತ್ತಾ? ಕೆಲಸದ ನಿಮಿತ್ತ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಿದ್ದಾನೆ. ತನಿಖೆಗೆ ಕರೆದಾಗ ಬರುತ್ತಾನೆ ಎಂದು ಹೆಚ್‌.ಡಿ.ರೇವಣ್ಣ ತಿಳಿಸಿದರು.

Tags:
error: Content is protected !!