Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕಾಲೇಜು ವಿದ್ಯಾರ್ಥಿಗಳ ಜತೆ ಹಳೇ ಸಂಸತ್‌ ಭವನದ ಮುಂದಿರುವ ಫೋಟೊ ಹಂಚಿಕೊಂಡ ಪ್ರತಾಪ್‌ ಸಿಂಹ

ಇಂದು ಹೊಸ ಸಂಸತ್‌ ಭವನದ ಒಳಗೆ ದುಷ್ಕರ್ಮಿಗಳು ನುಗ್ಗಿದ ಘಟನೆ ಇಡೀ ದೇಶದ ರಾಜಕಾರಣವನ್ನು ಅಲ್ಲೋಲ ಕಲ್ಲೋಲವಾಗುವಂತೆ ಮಾಡಿದ್ದು, ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಮೈಸೂರು ಮೂಲದ ಮನೋರಂಜನ್‌ ಎಂಬುವವನೂ ಸಹ ಶಾಮೀಲಾಗಿದ್ದು, ಸಾಗರ್‌ ಶರ್ಮಾ, ಅಮೋಲ್‌ ಹಾಗೂ ನೀಲಂ ಅಜಾದ್‌ ಇನ್ನಿತರ ಬಂಧಿತ ಆರೋಪಿಗಳಾಗಿದ್ದಾರೆ.

ಈ ನಾಲ್ವರ ಪೈಕಿ ಸಾಗರ್‌ ಶರ್ಮಾ ವಿಸಿಟರ್ಸ್‌ ಪಾಸ್‌ ಬಳಸಿ ಸಂಸತ್‌ ಒಳಗೆ ಪ್ರವೇಶಿಸಿದ್ದು, ಸಂಸತ್‌ ಪ್ರವೇಶಿಸಲು ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪಾಸ್‌ ಪಡೆದಿದ್ದಾನೆ. ಹೀಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಪಾಸ್‌ ಪಡೆದವರು ಈ ರೀತಿ ಕೃತ್ಯ ಎಸಗಿದ್ದು, ಕೂಡಲೇ ಪ್ರತಾಪ್‌ ಸಿಂಹ ಅವರನ್ನು ಅಮಾನತು ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಒಂದೆಡೆ ತಮ್ಮ ವಿರುದ್ಧ ಹೇಳಿಕೆಗಳು ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್‌ ಸಿಂಹ ದೆಹಲಿಯ ಹಳೆ ಸಂಸತ್‌ ಭವನದ ಎದುರು ಕಾಲೇಜು ವಿದ್ಯಾರ್ಥಿಗಳ ಜತೆ ಇರುವ ಫೋಟೊವನ್ನು ಟ್ವಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ವಿದ್ಯಾವರ್ಧಕ ಕಾಲೇಜಿನ ಪೊಲಿಟಿಕಲ್‌ ಸೈನ್ಸ್‌ ಸ್ಟೂಡೆಂಟ್ಸ್‌ ಜತೆಗೆ ಸೋಮವಾರ ಕ್ಲಿಕ್ಕಿಸಿಕೊಂಡ ಫೋಟೊʼ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ ಪ್ರತಾಪ್‌ ಸಿಂಹ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ