ಆಗ್ರ : ತಾಜ್‌ಮಹಲ್ ಹಾಗೂ ಮುಸ್ಲಿಮ್ ಸಮತಿ ವಿರುದ್ದ ಹಿಂದೂ ಮಹಾಸಭಾ ಕೋರ್ಟ್ ಮೆಟ್ಟಿಲೇರಿದೆ. ಯಾವ ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಮುಸ್ಲಿಮರು ಶಹಜಹಾನ್ ಸಾವಿನ ಸ್ಮರಾರ್ಥ ಉರುಸ್ ಆಚರಿಸುತ್ತಿದ್ದಾರೆ. ಈ ವೇಳೆ ಎಲ್ಲಾ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ.
ಅನುಮತಿ ಇಲ್ಲದೆ ತಾಜ್ ಮಹಲ್ ಒಳಗೆ ಆಚರಿಸುತ್ತಿರುವ ಉರುಸ್ ಆಚರಣೆಗೆ ತಡೆ ನೀಡಬೇಕು ಎಂದು ಹಿಂದೂ ಮಹಾಸಭಾ ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮಾರ್ಚ್ 4 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಫೆಬ್ರವರಿ 6 ರಿಂದ 8ರ ವರೆಗೆ ತಾಜ್ ಮಹಲ್ ಒಳಗೆಡೆ ಮುಸ್ಲಿಮರು ಶಹಜಹಾನ್ ಸ್ಮರಣಾರ್ಥ ಉರುಸ್ ಆಚರಿಸುತ್ತಾರೆ. ಇದೀಗ ಶಹಜಹಾನ್ 369ನೇ ಉರುಸ್ ಆಚರಣೆಗೆ ಮುಸ್ಲಿಮ್ ಸಮಿತಿ ಸಜ್ಜಾಗಿದೆ. ಎಲ್ಲಾ ತಯಾರಿ ಮಾಡಿಕೊಂಡಿದೆ. ಉರುಸ್ ಆಚರಣೆ ಹಾಗೂ ಈ ವೇಳೆ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ.





