ಬೆಂಗಳೂರು : ಬೌರಿಂಗ್ ಆಸ್ಪತ್ರೆಯಿಂದ ನ್ಯಾಯಾಲಯದತ್ತ ದರ್ಶನ ಸೇರಿದಂತೆ 13ಆರೋಪಿಗಳನ್ನು ಪೊಲೀಸರು ಕರೆದೊಯ್ದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೆಳಗ್ಗಿನಿಂದ ಅವರನ್ನು ವಿಚಾರಣೆ ಮಾಡಲಾಯಿತು.
ನಂತರ ಬೌರಿಂಗ್ ಆಸ್ಪತ್ರೆಗೆ ಆರೋಪಿಗಳ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿತ್ತು. ತಪಾಸಣೆಯ ಬಳಿಕ ಇದೀಗ ದರ್ಶನ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ಯಲಾಗುತ್ತಿದೆ.
ಎಫ್‌ಐಆರ್ ದಾಖಲು :ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿ ನಂ1 ಪವಿತ್ರ ಹಾಗೂ ನಟ ದರ್ಶನ್ ಅರೋಪಿ ನಂ2 ಹಾಗೂ ಪವನ್ ಎಂಬಾತ ಆರೋಪಿ ನಂ3 ಎಂದು ದಾಖಲಿಸಲಾಗಿದೆ.