ಲಾಸ್ ಏಂಜಲೀಸ್: 96ನೇ ಸಾಲಿನ ಆಸ್ಕರ್ ಅವಾರ್ಡ್‌ನ ಅತ್ಯುತ್ತಮ ಚಿತ್ರ ಹೆಗ್ಗಳೆಕಗೆ “ಓಪನ್ ಹೈಮರ್” ಭಾಜನವಾಗಿದೆ. (ಈ ಚಿತ್ರ ಬರೋಬ್ಬರಿ 13 ವಿಭಾಗದಲ್ಲಿ ನಾಮಿನೇಟ್ ಆಗಿತ್ತು ಅನ್ನೋದು ವಿಶೇಷ) ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಿಲಿಯನ್ ಮರ್ಫಿ ತಮ್ಮದಾಗಿಸಿಕೊಂಡಿದ್ದಾರೆ.
ಅಮೇರಿಕಾದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್ ವೇದಿಕೆಯಲ್ಲಿ ಭಾನುವಾರ (ಅಮೇರಿಕಾ ಕಾಲಮಾನ) ಆವಾರ್ಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲೆ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಹಲವು ಹಾಲಿವುಡ್ ತಾರೆಯರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಸಿನಿ ರಸಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ಆಸ್ಕರ್ ಅವಾರ್ಡ್‌ನ ಸಂಪೂರ್ಣ ವಿವರ:
• ಅತ್ಯುತ್ತಮ ಚಿತ್ರ: ಓಪನ್ ಹೈಮರ್
• ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್
• ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್
• ಅತ್ಯುತ್ತಮ ನಟ: ಸಿಲಿಯನ್ ಮರ್ಫಿ
• ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ರೋನ್ ಆಫ್ ಇಂಟರೆಸ್ಟ್’
• ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಓಪೆನ್ ಹೈಮರ್)
• ಅತ್ಯುತ್ತಮ ಪೋಷಕ ನಟಿ: ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲವರ್ಸ್)
• ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್)
• ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಡಿಲ್ಲಾ ಮೈನಸ್ ಒನ್’
• ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ನ್ ಆಫ್ ಇಂಟರೆಸ್ಟ್’
• ಅತ್ಯುತ್ತಮ ಸಂಕಲನ: ‘ಓಪನ್ ಹೈಮರ್’
• ಅತ್ಯುತ್ತಮ ಛಾಯಾಗ್ರಹಣ: ‘ಓಪನ್ ಹೈಮರ್’
• ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ “ಅನ್ಯಾಟಮಿ ಆಫ್ ಎ ಫಾಲ್’
• ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್”
• ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’
• ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ‘ಪೂರ್ ಥಿಂಗ್ಸ್’ (Poor Things)
• ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಶಾಪ್’