Mysore
27
broken clouds

Social Media

ಬುಧವಾರ, 09 ಜುಲೈ 2025
Light
Dark

ವಿಪಕ್ಷಗಳ ಸಭೆ: ‘ಅಸಮಾಧಾನ’ ವರದಿ ತಿರಸ್ಕರಿಸಿದ ನಿತೀಶ್ ಕುಮಾರ್

ಪಾಟ್ನಾ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ತಮಗೆ ಅಸಮಾಧಾನವಿದೆ ಎಂಬ ಮಾಧ್ಯಮಗಳ ವರದಿಯನ್ನು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ತಳ್ಳಿ ಹಾಕಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಮಾವೇಶದ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಗೆ ಗೈರಾಗಿದ್ದ ವಿಚಾರವಾಗಿ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನಾವೆಲ್ಲರೂ ಒಗ್ಗಾಟ್ಟಾಗಿದ್ದೇವೆ.. ಒಗ್ಗೂಡಿ ಬಿಜೆಪಿಯನ್ನು ಎದುರಿಸುತ್ತೇವೆ. ರಾಜ್ ಗಿರ್ ನಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ನಾನು ಸುದ್ದಿಗೋಷ್ಠಿಗೆ ಗೈರಾಗಿದ್ದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ್ದ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ‘ಲಾಲನ್’ ಅವರು ವಿರೋಧ ಪಕ್ಷದ ಸಭೆಯಲ್ಲಿ ವಿಷಯಗಳು ನಡೆದ ರೀತಿಯ ಬಗ್ಗೆ ನಿತೀಶ್ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದರು.  ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ‘ದುಷ್ಪ್ರಚಾರ್’ (ಕ್ಯಾನಾರ್ಡ್) ಎಂದು ಬಣ್ಣಿಸಿದರು.

ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯ ಕಡೆಯಿಂದ ಇದೆಲ್ಲವೂ ದುಷ್ಪ್ರಚಾರ ಮತ್ತು ವದಂತಿಗಳಷ್ಟೇ. ಇಂಡಿಯಾ ಎಂಬ ಹೆಸರು ಪ್ರತಿಪಕ್ಷ ಸಭೆಯಲ್ಲಿ ಹಾಜರಿದ್ದ ಎಲ್ಲಾ ನಾಯಕರಿಂದ ಅನುಮೋದನೆಯ ಮುದ್ರೆಯನ್ನು ಹೊಂದಿತ್ತು ಎಂದು ಲಾಲನ್ ಹೇಳಿದರು.

ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡಲಾಗುತ್ತದೆ ಎಂಬ ಊಹಾಪೋಹಗಳ ಬಗ್ಗೆ ಮಾತನಾಡಿದ ಜೆಡಿಯು ಮುಖ್ಯಸ್ಥರು, “ಇದು ನಿನ್ನೆಯ ಸಭೆಯ ಅಜೆಂಡಾದಲ್ಲಿ ಇರಲಿಲ್ಲ, ಮುಂಬೈನಲ್ಲಿ ಮುಂದಿನ ಸಭೆ ಯಾವಾಗ ನಡೆಯಲಿದೆ ಎಂದು ಯೋಚಿಸಬಹುದು” ಎಂದು ಹೇಳಿದರು.

ನಿತೀಶ್ ಕುಮಾರ್ ಅವರು ‘ಇಂಡಿಯಾ’ ಎಂಬ ಸಂಕ್ಷಿಪ್ತ ರೂಪದಿಂದ ಅತೃಪ್ತರಾಗಿದ್ದು ಹೊಸ ಒಕ್ಕೂಟದ ಸಂಚಾಲಕರನ್ನಾಗಿ ಮಾಡದಿರುವ ಬಗ್ಗೆ ಬೇಸರಗೊಂಡಿದ್ದಾರೆ ಎಂದು ವರದಿ ಮಾಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!