ಲಖನೌ : ಐಐಟಿ-ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ಮೇಲೆ ಹಾಸ್ಟೆಲ್ ಎದುರೇ ವಿವಸ್ತ್ರಗೊಳಿಸಿ, ಕೆಲ ಯುವಕರು ಕಿರುಕುಳ ನೀಡಿರುವ ಘಟನೆ ನಡೆದಿದೆ.
ಆಕೆ ಹಾಸ್ಟೆಲ್ನ ಹೊರಗಡೆ ತನ್ನ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ತಕ್ಷಣವೇ ಆಕೆ ಓಡಿ ಹೋಗಿ 20 ನಿಮಿಷಗಳ ಕಾಲ ಪ್ರಾಧ್ಯಾಪಕರ ಮನೆಯಲ್ಲಿ ಅಡಗಿ ಕುಳಿತಿದ್ದಳು.
ವಿದ್ಯಾರ್ಥಿನಿಯು ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್‌ನಿಂದ ಹೊರಬಂದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿದ್ದಾರೆ.
ಆಕೆಯನ್ನು ಬಲವಂತವಾಗಿ ಒಂದು ಮೂಲೆಗೆ ಕರೆದೊಯ್ದಿದ್ದಾರೆ ಆಕೆಯ ಸ್ನೇಹಿತನಿಂದ ದೂರ ಕರೆದೊಯ್ದು, ಬಾಯಿಯನ್ನು ಮುಚ್ಚಿ, ವಿವಸ್ತ್ರಗೊಳಿಸಿದ್ದಾರೆ.
ಅಷ್ಟೇ ಅಲ್ಲದೆ ಆಕೆಯ ಫೋಟೊವನ್ನು ಕ್ಲಿಕ್ಕಿಸಿದ್ದಾರೆ, 15 ನಿಮಿಷಗಳ ನಂತರ ಆಕೆಯನ್ನು ಹೋಗಲು ಬಿಟ್ಟು ಆಕೆಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡಿದ್ದಾರೆ.
ಆಕೆ ತಕ್ಷಣವೇ ಓಡಿ ಹೋಗಿ ಪ್ರಾಧ್ಯಾಪಕರ ಮನೆಯನ್ನು ತಲುಪಿದ್ದಾಳೆ, ತಕ್ಷಣವೇ ಆಕೆಯನ್ನು ಮನೆಯೊಳಗೆ ಕರೆದೊಯ್ದು, ಸಮಾಧಾನಪಡಿಸಿದ್ದಾರೆ.
ವಿದ್ಯಾರ್ಥಿಯನ್ನು ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ತನ್ನ ಹಾಸ್ಟೆಲ್‌ಗೆ ಕರೆದೊಯ್ದರು. ಘಟನೆಯ ನಂತರ ವಿದ್ಯಾರ್ಥಿನಿ ತೀವ್ರ ಆಘಾತಕ್ಕೊಳಗಾಗಿದ್ದು, ತನ್ನ ಹಾಸ್ಟೆಲ್‌ನಿಂದ ಹೊರಬರುತ್ತಿಲ್ಲ ಎಂದು ಹೇಳಲಾಗಿದೆ. ಗಲಾಟೆಯಲ್ಲಿ ಆಕೆಯ ಸ್ನೇಹಿತೆ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.