Mysore
20
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

ಕೊರೊನಾ ಹೊಸ ಅಲೆ ಸೃಷ್ಟಿಸುತ್ತಾ ? ವಿಶ್ವ ಆರೋಗ್ಯ ಸಂಸ್ಥೆ ವಾರ್ನಿಂಗ್..!

ಹೊಸ ದಿಲ್ಲಿ: ಕೊರೊನಾ ವೈರಸ್ ಹೊಸ ಅಲೆಯ ಸಾಧ್ಯತೆಯ ಆತಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ಹೊರಹಾಕಿದೆ. ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್, ಕೆಲವು ದೇಶಗಳು ಕೋವಿಡ್ ಹೊಸ ಅಲೆಯನ್ನು ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಅದೂ ಕೂಡಾ ಓಮಿಕ್ರಾನ್‌ನ ಉಪ ರೂಪಾಂತರಿ ತಳಿ ಎಕ್ಸ್‌ಬಿಬಿ ವೈರಸ್‌ನಿಂದ ಹೊಸ ಅಲೆ ಸೃಷ್ಟಿಯಾಗುವ ಆತಂಕವನ್ನು ಅವರು ಹೊರ ಹಾಕಿದ್ದಾರೆ.

ಓಮಿಕ್ರಾನ್ ವೈರಾಣು ಈಗಾಗಲೇ 300ಕ್ಕೂ ಹೆಚ್ಚು ಉಪ ರೂಪಾಂತರಿಗಳನ್ನು ಸೃಷ್ಟಿಸಿದೆ. ಆದರೆ ಈ ಎಲ್ಲ ಉಪ ರೂಪಾಂತರಿಗಳಿಗಳ ಪೈಕಿ ಎಕ್ಸ್‌ಬಿಬಿ ವೈರಾಣು ಅಪಾಯಕಾರಿ ಆಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಏಕೆಂದರೆ ಇದು ಮಿಶ್ರ ತಳಿಯ ವೈರಾಣು ಆಗಿದ್ದು, ಬೇರೆ ರೀತಿಯ ಸಂಯೋಜನೆ ಹೊಂದಿದೆ. ಈ ರೀತಿಯ ಹಲವು ತಳಿಗಳು ಈಗಾಗಲೇ ಪತ್ತೆಯಾಗಿವೆ. ಈ ವೈರಣು ಅತಿ ಸುಲಭವಾಗಿ ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿವೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!