Mysore
22
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಗಾಂಧಿ ವಿಧಿವಶ

ಮುಂಬೈ : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮೊಮ್ಮಗ, ಲೇಖಕ ಅರುಣ್ ಗಾಂಧಿ (89 ) ಅನಾರೋಗ್ಯದಿಂದ ಇಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ. ಮೃತದೇಹದ ಅಂತ್ಯಕ್ರಿಯೆ ಇಂದು ಕೊಲ್ಲಾಪುರದಲ್ಲಿ ನಡೆಯಲಿದೆ ಎಂದು ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.

ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರಾದ ಅರುಣ್ ಗಾಂಧಿ ಏಪ್ರಿಲ್ 14, 1934 ರಂದು ಡರ್ಬನ್‌ನಲ್ಲಿ ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಮಗನಾಗಿ ಜನಿಸಿದರು. ಸಾಮಾಜಿಕ ಕಾರ್ಯಕರ್ತನಾಗಿ ತಮ್ಮ ಅಜ್ಜ ಮಹಾತ್ಮಾ ಗಾಂಧಿ ಹಾದಿಯಲ್ಲಿ ಸಾಗಿದವರು.
ಅರುಣ್ ಗಾಂಧಿಯವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ, ‘ದಿ ಗಿಫ್ಟ್ ಆಫ್ ಆಂಗರ್, ಅಂಡ್ ಅದರ್ ಲೆಸನ್ಸ್ ಫ್ರಂ ಮೈ ಗ್ರ್ಯಾಂಡ್ ಫಾದರ್ ಮಹಾತ್ಮ ಗಾಂಧಿ ಅವರ ಪ್ರಮುಖ ಪುಸ್ತಕಗಳಾಗಿವೆ.

ಮೃತರ ಅಂತ್ಯಕ್ರಿಯೆ ಸಂಜೆ 05:00 ರಿಂದ 06:30 ರವರೆಗೆ ಕೊಲ್ಲಾಪುರ ಜಿಲ್ಲೆಯ ಕರ್ವೀರ್, ನಂದವಾಲ್ ರಸ್ತೆಯಲ್ಲಿರುವ ಗಾಂಧಿ ಫೌಂಡೇಶನ್ ಆವರಣದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ತುಂಬಾ ದಿನಗಳಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎನ್ನಲಾಗಿದೆ, ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿ ನೆರವೇರಲಿದೆ ಎಂದು ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.
ಅರುಣ್ ಗಾಂಧಿ 1987ರಲ್ಲಿ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದರು. ಇಲ್ಲಿ ಅವರು ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿ ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದರು. ಇಲ್ಲಿ ಅವರು ಕ್ರಿಶ್ಚಿಯನ್ ಬ್ರದರ್ಸ್ ವಿಶ್ವವಿದ್ಯಾಲಯದಲ್ಲಿ ಅಹಿಂಸೆಗೆ ಸಂಬಂಧಿಸಿದ ಸಂಸ್ಥೆಯನ್ನು ಸ್ಥಾಪಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!