Mysore
25
overcast clouds

Social Media

ಮಂಗಳವಾರ, 01 ಏಪ್ರಿಲ 2025
Light
Dark

ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ 56 ಕಡೆಗಳಲ್ಲಿ ಲೋಕಾಯುಕ್ತ ದಿಢೀರ್‌ ದಾಳಿ!

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ 56 ಕಡೆಗಳಲ್ಲಿ ಲೋಕಾಯುಕ್ತ ದಿಢೀರ್‌ ದಾಳಿ ಮಾಡಿದೆ.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಇಂದು (ಜುಲೈ. 11) ಬೆಳಿಗ್ಗೆಯಿಂದಲೇ ರಾಜ್ಯದ ನಾನಾ ಕಡೆಗಳಲ್ಲಿ ದಾಳಿ ಮಾಡಿ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹನ್ನೊಂದು ಜನ ನಿವೃತ್ತ ಅಧಿಕಾರಿಗಳ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಮೈಸೂರು, ಮಂಡ್ಯ, ಬೆಂಗಳೂರು, ಕಲಬುರಗಿ, ಚಿತ್ರದರ್ಗಾ, ಬೆಳಗಾವಿ, ದಾವಣಗೆರೆ, ಕೋಲಾರ, ಹಾಸನ ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದ್ದು, 56 ಕಡೆಗಳಲ್ಲಿ 100 ಕ್ಕೂ ಹೆಚ್ಚಿನ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.

Tags: