ಹುಬ್ಬಳ್ಳಿ : ಒಂದು ಟಿಕೆಟ್‌ಗಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತಿದೆ. ಆರ್‌ಎಸ್‌ಎಸ್, ಬಜರಂಗದಳ, ಹಿಂದೂ ಧರ್ಮದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ಶೆಟ್ಟರ್ ಅವರ ಸ್ವಾಭಿಮಾನವನ್ನು ನಾನು ನಿರೀಕ್ಷೆ ಮಾಡಿದ್ದೆ. ಬಜರಂಗದಳ ನಿಷೇಧದ ಕುರಿತು ಅವರ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಆಗ್ರಹಿಸಿದರು. ಬಜರಂಗದಳ ರಾಷ್ಟ್ರ, ಧರ್ಮ ರಕ್ಷಣೆ ಮಾಡುತ್ತಿದೆ.
ಯಾವುದೇ ಸಾಮಾನ್ಯ ಜ್ಞಾನ ಇಲ್ಲದೆ ಕಾಂಗ್ರೆಸ್‌ನವರು ಪ್ರಣಾಳಿಕೆ ಸಿದ್ಧಪಡಿಸಿ, ಅದರಲ್ಲಿ ಬಜರಂಗ ದಳ ನಿಷೇಧದ ವಿಷಯ ಸೇರಿಸಿದ್ದಾರೆ. ಕಾಂಗ್ರೆಸ್‌ನವರು ಈ ಪ್ರಣಾಳಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು ಆಗ್ರಹಿಸಿದರು. ಮುಸಲ್ಮಾರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್ ಕೆಲಸ. ಬಜರಂಗದಳ ನಿಷೇಧಿಸುವ ವಿಚಾರದಲ್ಲಿ ಅವರದ್ದೇ ಆದ ಗೊಂದಲ ಇದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜಾತಿವಾದಿಗಳಾಗಿದ್ದು, ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ಕೆಡಿ ಶಿವಕುಮಾರ್ ಎಂದು ಇಟ್ಟುಕೊಳ್ಳಲಿ ಎಂದು ಹೇಳಿದರು.