Mysore
24
scattered clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

IND vs SA 2nd T20: ಸೂರ್ಯ, ರಿಂಕು ಅರ್ಧಶತಕ; ಮಳೆ ಕಾರಣದಿಂದಾಗಿ 15 ಓವರ್‌ಗೆ ಪಂದ್ಯ

ಟೀಮ್‌ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿದ್ದು ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಿದೆ. ಡಿಸೆಂಬರ್‌ 10ರಂದು ನಡೆದ ಮೊದಲ ಪಂದ್ಯ ಮಳೆ ಕಾರಣದಿಂದಾಗಿ ಟಾಸ್‌ ಕೂಡ ಆಗದೇ ರದ್ದಾಗಿತ್ತು. ಇಂದು ( ಡಿಸೆಂಬರ್‌ 12 ) ಎರಡನೇ ಟಿ ಟ್ವೆಂಟಿ ಪಂದ್ಯ ಜಿಕೆಬರ್ಹಾದ ಸೇಂಟ್‌ ಜಾರ್ಜ್‌ ಪಾರ್ಕ್‌ನಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ದುಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿರುವ ಭಾರತ ತಂಡ 19.3 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 180 ರನ್‌ ಕಲೆಹಾಕಿದೆ. 19.3 ಓವರ್‌ ಬಳಿಕ ಮಳೆ ಬಂದ ಕಾರಣ ಇನ್ನಿಂಗ್ಸ್‌ ಅನ್ನು ಮೊಟಕುಗೊಳಿಸಿದ್ದು ಡೆಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಪಂದ್ಯ 15 ಓವರ್‌ಗೆ ನಡೆಯಲಿದೆ. ಡೆಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ 15 ಓವರ್‌ಗಳಲ್ಲಿ ಗೆಲ್ಲಲು 152 ರನ್‌ಗಳನ್ನು ಬಾರಿಸಬೇಕಿದೆ.

ಭಾರತದ ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭ್‌ಮನ್‌ ಗಿಲ್‌ ಡಕ್‌ಔಟ್‌ ಆದ ಕಾರಣ ತಂಡ 2 ಓವರ್‌ಗಳಲ್ಲಿ ಕೇವಲ 6 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಜತೆಗೂಡಿ ತಂಡದ ಮೊತ್ತ ಸುಧಾರಿಸುವ ಹಾಗೆ ಮಾಡಿದರು.

ತಿಲಕ್‌ ವರ್ಮಾ 29 ರನ್‌ ಬಾರಿಸಿದರೆ, ಸೂರ್ಯಕುಮಾರ್‌ ಯಾದವ್‌ 36 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿ ಸಹಿತ 56 ರನ್‌ ಬಾರಿಸಿದರು. ಈ ಪಂದ್ಯದಲ್ಲಿಯೂ ಅಬ್ಬರಿಸಿದ ರಿಂಕು ಸಿಂಗ್‌ 39 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 9 ಬೌಂಡರಿ ಸಹಿತ 68 ರನ್‌ ಬಾರಿಸಿದರು. ಇನ್ನುಳಿದಂತೆ ರವೀಂದ್ರ ಜಡೇಜಾ 19 ರನ್‌, ಜಿತೇಶ್‌ ಶರ್ಮಾ 1 ರನ್‌, ಅರ್ಷ್‌ದೀಪ್‌ ಸಿಂಗ್ ಡಕ್‌ಔಟ್‌, ಮೊಹಮ್ಮದ್‌ ಸಿರಾಜ್‌ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!