Mysore
21
overcast clouds
Light
Dark

ನಮ್ಮ ಬಳಿ ನೈಸ್‌ ಸಂಸ್ಥೆ ಜಮೀನಿದ್ದರೆ, ಇಡೀ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ: ಎಚ್‌ಡಿಕೆ

ಬೆಂಗಳೂರು : ನಮ್ಮ ಕುಟುಂಬದ ಯಾವುದೇ ವ್ಯಕ್ತಿ ಹೆಸರಿನಲ್ಲಿ ನೈಸ್ ಸಂಸ್ಥೆಯ ಜಮೀನಿದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದವರ ಹೆಸರಿನಲ್ಲಿ ನೈಸ್ ಸಂಸ್ಥೆಗೆ ಸೇರಿದ ಯಾವುದೇ ಆಸ್ತಿ ಇಲ್ಲ ಎಂದರು.

ಸಂಸದ ಡಿ.ಕೆ. ಸುರೇಶ್ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ ಅವರು, ನೈಸ್ ಸಂಸ್ಥೆ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇವರು ನೈಸ್ ನೈಸ್ ಸಂಸ್ಥೆಯ ಜಮೀನು ಕಬಳಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹಿ ಹಾಕಿದ್ದರೆ ಎಂದು ಪ್ರಶ್ನಿಸಿದರು.

ಬೆಂಗಳೂರು- ಮೈಸೂರು ನಡುವೆ ಎಕ್ಸ್‍ಪ್ರೆಸ್ ಹೈವೇ ನಿರ್ಮಾಣ ಮಾಡುವ ಯೋಜನೆಗೆ ದೇವೇಗೌಡರು ಸಹಿ ಹಾಕಿದ್ದರು. ಆ ನೈಸ್ ರಸ್ತೆ ಹೆಸರಿನಲ್ಲಿ ಆ ಸಂಸ್ಥೆ ಜೊತೆ ಶಾಮೀಲಾಗಿ ರೈತರ ಜಮೀನು ಹೊಡೆಯುವ ಉದ್ದೇಶದಂದಲ್ಲ ಎಂದು ಸ್ಪಷ್ಟಪಡಿಸಿದರು.

ನೈಸ್ ಕಂಪೆನಿ ಜೊತೆ ವ್ಯವಹಾರ ಮಾಡಿರುವ ಸಣ್ಣ ಸಾಕ್ಷಿ ಇದ್ದರೂ ಕೊಡಿ. ನಿವೃತ್ತಿ ಹೊಂದುತ್ತೇವೆ. 25 ವರ್ಷ ಕಳೆದರೂ ರಸ್ತೆ ಮಾಡಲಿಲ್ಲ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ವ್ಯಕ್ತಿಗೆ ಕೇಳುತ್ತೇನೆ. ನಿಮ್ಮ ಅಣ್ಣ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬಿಎಂಐಸಿ ಯೋಜನೆಯ ಮೂಲ ಒಪ್ಪಂದ ಏನಿತ್ತು. ಸುಪ್ರೀಕೋರ್ಟ್, ಹೈಕೋರ್ಟ್‍ನ ನಿರ್ದೇಶನಗಳು ಏನಿದ್ದವು ಎಂದು ಪ್ರಶ್ನಿಸಿದರು.

2000 ಎಕರೆ ಜಮೀನು ಯಾರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದೀರಾ, ನಿಮ್ಮ ಕುಟುಂಬದ ಅವರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದೀರಾ. ವ್ಯವಹಾರ ನಡೆಸುತ್ತಿರುವವರು ನೀವು ಎಂದು ಆಕ್ರೋಶ ಪರಿಕರಾಗಿ ಆರೋಪಿಸಿದರು.

ತಮಿಳು ನಾಡಿಗೆ ನಾನು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೂ ಕಾವೇರಿ ನೀರು ಬಿಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಎತ್ತೇಚ್ಚವಾಗಿ ನೀರು ಬಿದ್ದಾಗ ತಮಿಳು ನಾಡಿಗೆ ನೀರು ಹರಿಸಲಾಗಿದೆ. ದೇವೇಗೌಡರು ಕೂಡ ನೀರು ಹರಿಸಿದ್ದು, ನ್ಯಾಯಾಲಯದ ನಿರ್ದೇಶನ ಕೊಟ್ಟಾಗ ಎಂದು ಸ್ಪಷ್ಟ ನೀಡಿದರು.

ದೇವೇಗೌಡರು ಎಂದೂ ಕೂಡ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ಈ ತಮಿಳುನಾಡಿಗೆ ನೀರು ಹರಿಸಿಲ್ಲ. ಅವರ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದು ಏನಾಯಿತು. ಚಿಕ್ಕನ್‍ಲೆಗ್ ತಿಂದು ಎಂದು ಹೋರಾಟ ಮಾಡಿದ್ದಷ್ಟೇ. ನಿಮ್ಮ ಸ್ನೇಹಿತರೇ ಅಲ್ಲವೇ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೊಟ್ಟು ತೆಗೆದುಕೊಳ್ಳುವ ಸಂಬಂಧ ಮಾಡುತ್ತಿದ್ದೀರಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಮ್ಮ ರೈತರು ಇನ್ನು ಒಂದು ಬೆಳೆ ಬೆಳೆದಿಲ್ಲ. ತಮಿಳು ನಾಡಿಗೆ ನೀರು ಹರಿಸುತ್ತಿದ್ದೀರಿ. ನಮ್ಮ ರೈತರ ಮೇಲೆ ಔದರ್ಯವೇ ಇಲ್ಲ. ಈ ಕೆಲಸ ಮಾಡಲು ನೀವು ಪೆನ್ನು ಕೊಡಿ ಎಂದು ಕೇಳಿದ್ದು, ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಓಲೈಕೆ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸುಪ್ರೀಂಕೋರ್ಟ್‍ನ ಮುಂದೆ ಮತ್ತೊಂದು ಅರ್ಜಿ ಹಾಕುತ್ತಾರೆ. ಹಾಗಾಗಿ ಇವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸ್ಟಾಲಿನ್ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿದ್ದೀರಿ ಎಂದು ಟೀಕಾ ಪ್ರಹರ ಮಾಡಿದರು. 2016-17ರಲ್ಲಿ ಗಾಂ ನಗರ ಮತ್ತು ಮಲ್ಲೇಶ್ವರಂ ನಲ್ಲಿ ಜಾಬ್‍ಕೋಡ್ ಬಗ್ಗೆ ನೀಡಿದ ತನಿಖಾ ವರದಿ ಎಲ್ಲಿದೆ ಎಂದ ಅವರು, ಈಗ ತನಿಖೆ ನಡೆಸಲು ನ್ಯಾಯಮೂರ್ತಿ ನಾಗ್‍ಮೋಹನ್ ದಾಸ್ ಅವರಿಗೆ ಕೊಟ್ಟಿದ್ದಾರೆ. ಇದು ಸಮಯ ಕಳೆಯಲು ಮಾಡುತ್ತಿರುವ ಕೆಲಸ ಎಂದು ಆರೋಪಿಸಿದರು.

ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ್ದಂತೆ ನನಗೆ ಬೆದರಿಕೆ ಹಾಕಲು ಆಗುವುದಿಲ್ಲ ಎಂದರು.

ಸನ್ಮಾನಿಸಲಿ:
ಆಪರೇಷನ್ ಹಸ್ತದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದವರು ಹೋಗುವುದಿದ್ದರೆ ಮೈಸೂರು ಪೇಟಾ ಧರಿಸಿ ಶಾಲು ಹೊದಿಸಿ ಅವರ ಪಕ್ಷಕ್ಕೆ ಕರೆದುಕೊಳ್ಳಲಿ. ಅವರನ್ನು ತಡೆದಿರುವವರು ಯಾರು ಎಂದು ಪ್ರಶ್ನಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ