Mysore
22
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ನಾವು ಕಾವೇರಿಗಾಗಿ ಬಂದ್‌ಗೆ ಕರೆ ನೀಡಿದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಬಂದ್‌ ಮಾಡುತ್ತಿದೆ : ವಾಟಾಳ್‌ ಆಕ್ರೋಶ

ಬೆಂಗಳೂರು : ಕಾವೇರಿಗಾಗಿ ನಾವು ಕರ್ನಾಟಕ ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾಲರ್ಸ್‌ ಕಾಲೋನಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಎರಡು ಬಂದ್‌ ನಡೆಯುತ್ತಿದೆ. ನಾವು ಕಾವೇರಿಗಾಗಿ ಬಂದ್‌ಗೆ ಕರೆ ನೀಡಿದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಬಂದ್‌ ಮಾಡುತ್ತಿದೆ. ಸರ್ಕಾರ ಕಾವೇರಿ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ಸಿಟ್ಟು ಹೊರಹಾಕಿದರು.

ಬಂದ್‌ಗೆ ಬೆಂಬಲ ನೀಡಿದ ಜನತೆಗೆ ಧನ್ಯವಾದ ಹೇಳಿದ ವಾಟಾಳ್‌, ಅಖಂಡ ಕರ್ನಾಟಕ ಹೆಸರನ್ನು ಕನ್ನಡಿಗರು ಉಳಿಸಿದ್ದಾರೆ. ದೇಶಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶನವಾಗಿದೆ ಎಂದು ಹೇಳಿದರು.

ಇಂದು ವಾಟಾಳ್‌ ನಾಗರಾಜ್‌ ಬುರ್ಖಾ ಧರಿಸಿ ತಲೆಯ ಮೇಲೆ ನೀರಿನ ಖಾಲಿ ಕೊಡ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!