ಬೆಂಗಳೂರು : ನಾನೇನೆ ಕೆಲಸ ಮಾಡಿದ್ದರೂ ಅದನ್ನು ಪಕ್ಷಕ್ಕಾಗಿ ಮಾಡಿದ್ದೇನೆ. ನಾನೇನು ತಪ್ಪು ಮಾಡಿಲ್ಲ, ನನ್ನ ಪಾಲಿಗೆ ಭಗಂತನಿದ್ದಾನೆ ಎಂದು ಬುಧವಾರ (ನವೆಂಬರ್ 29) ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿಯಲ್ಲ, ನಮ್ಮ ವಕೀಲರ ಬಳಿ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ. ಕೋರ್ಟ್ ವಿಚಾರದಲ್ಲಿ ದೂರ ಇರುವುದೇ ಮೇಲು ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.
ಯತ್ನಾಳ್ ಸೇರಿದಂತೆ ಯಾರು ಬೇಕಾದರು ಏನಾದರೂ ತಿಳಿದುಕೊಳ್ಳಲಿ, ಅವರ ಆಚಾರ, ವಿಚಾರ, ಭಾವನೆ ಮಾತನ್ನು ಬಹಳ ನಮೃತೆಯಿಂದ ಗಮನಿಸಿದ್ದೇನೆ ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ವೇದಿಕೆಯಲ್ಲಿ ಉತ್ತರ ಕೊಡುತೇನೆ ಎಂದು ಯತ್ನಾಳ್ ಆರೋಪಕ್ಕೆ ಟಾಂಗ್ ಕೊಟ್ಟರು.
ಜನರೇ ನೋಡಿದ್ದಾರೆ ನಾನೇನು ತಪ್ಪು ಮಾಡಿಲ್ಲ ಎಲ್ಲವನ್ನು ಪಾರ್ಟಿಗಾಗಿ ಮಾಡಿದ್ದೇನೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದಕ್ಕೆ ಮಾಡಿದಕ್ಕೆ ತೊದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಡುತ್ತೇನೆ ಎಂದರೆ ಆ ಭಗವಂತ ನನ್ನ ಪರವಾಗಿದ್ದಾನೆ, ನಾಡಿನ ಜನತಯಿದ್ದಾರೆ. ನನಗೆ ತೊಂದರೆ ಕೊಟ್ಟವರಿಗೆ ಈ ರಾಜ್ಯದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ನನ್ನ ಪರವಾಗಿ ನಿಂತ ಜನರೆಲ್ಲರಿಗೂ ಕೋಟಿ ನಮಸ್ಕಾರಗಳು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಸಚಿವರಾದ ಎಂ. ಬಿ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಜೊತೆಯಲ್ಲಿದ್ದರು.





