Mysore
22
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಪಂಜಾಬ್ ಮಾಜಿ ಸ್ಪೀಕರ್ ಚರಂಜಿತ್ ಸಿಂಗ್ ಅತ್ವಾಲ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ಚರಂಜಿತ್ ಸಿಂಗ್ ಅತ್ವಾಲ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಶುಕ್ರವಾರ ಸೇರ್ಪಡೆಗೊಂಡರು.

ಚರಂಜಿತ್ ಸಿಂಗ್ ಅತ್ವಾಲ್ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು.

2004 ರಿಂದ 2009 ರವರೆಗೆ 14 ನೇ ಲೋಕಸಭೆಯ ಉಪ ಸ್ಪೀಕರ್ ಆಗಿದ್ದ ಚರಂಜಿತ್ ಸಿಂಗ್ ಅತ್ವಾಲ್ ಅವರು ಈ ಹಿಂದೆ ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಅತ್ವಾಲ್ ಅವರು 15 ಮಾರ್ಚ್ 1937 ರಂದು ಜನಿಸಿದರು.

14 ನೇ ಲೋಕಸಭೆಯಲ್ಲಿ ಪಂಜಾಬ್‌ನ ಫಿಲ್ಲೌರ್ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ಶಿರೋಮಣಿ ಅಕಾಲಿದಳ ಸದಸ್ಯರಾಗಿದ್ದರು. ಪಂಜಾಬ್ ವಿಧಾನಸಭೆಯ ಎರಡು ಬಾರಿ ಸ್ಪೀಕರ್ ಕೂಡ ಆಗಿದ್ದರು.

ಚರಂಜಿತ್ ಅವರ ಪುತ್ರ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್ ಅವರು ಪಂಜಾಬ್‌ನ ಹಲವಾರು ಇತರರೊಂದಿಗೆ ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ್ದರು ಎಂಬುದು ಗಮನಾರ್ಹ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!