Mysore
16
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಇವಿಎಂ ದೋಷ: ಮತದಾನ ಮಾಡಲು ಸಾಧ್ಯವಾಗದೆ ವಾಪಸಾದ ಮಿಜೋರಾಂ ಮುಖ್ಯಮಂತ್ರಿ

ಐಝಾವ್ಲ್ : ‌ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ವೇಳೆ ಇವಿಎಂ ದೋಷದಿಂದಾಗಿ ಮಿಜೋರಾಂ ಮುಖ್ಯಮಂತ್ರಿ ಝೊರಂತುಂಗಾ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.

ಮಿಜೋ ನ್ಯಾಷನಲ್‌ ಫ್ರಂಟ್‌ ಅಧ್ಯಕ್ಷರೂ ಆಗಿರುವ ಸಿಎಂ ಇಂದು ಬೆಳಿಗ್ಗೆ 19-ಐಝಾವ್ಲ್‌ ವೆಂಗ್ಲೈ- I ವೈಎಂಎ ಹಾಲ್‌ ಮತಗಟ್ಟೆಗೆ ಆಗಮಿಸಿದ್ದರು. ಈ ಮತಗಟ್ಟೆಯು ಐಝಾವ್ಲ್‌ ಉತ್ತರ- I I ವಿಧಾನಸಭಾ ಕ್ಷೇತ್ರದಡಿಯಲ್ಲಿ ಬರುತ್ತದೆ.

“ಇವಿಎಂ ಕೆಲಸ ಮಾಡದೇ ಇದ್ದುದರಿಂದ ನಾನು ಸ್ವಲ್ಪ ಹೊತ್ತು ಕಾದೆ. ಆದರೆ ಯಂತ್ರ ಸರಿಯಾಗದೇ ಇದ್ದುದರಿಂದ ನಾನು ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಸಭೆಯೊಂದರ ನಂತರ ಮತದಾನ ಮಾಡುತ್ತೇನೆ,” ಎಂದು ಮುಖ್ಯಮಂತ್ರಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ತಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. “ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ತಮ್ಮ ಪಕ್ಷ ಭಾಗವಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿಯಿಲ್ಲ,” ಎಂದು ಅವರು ಹೇಳಿದರು.

ಝೊರಂತುಂಗ ಅವರು ಐಝ್ವಾಲ್‌ ಪೂರ್ವ- I ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!