Mysore
20
scattered clouds

Social Media

ಸೋಮವಾರ, 26 ಜನವರಿ 2026
Light
Dark

13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಿಸಿದ ಇಸಿಎ

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಸೇರಿದಂತೆ ಒಟ್ಟು 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಿಸಿ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ. ಈ ಚುನಾವಣೆ ಜುಲೈ 10 ರಂದು ನಡೆಯಲಿದ್ದು, ಜುಲೈ 13ರಂದು ಮತ ಎಣಿಕೆ ನಡೆಯಲಿದೆ.

ಉಪಚುನಾವಣಾ ವೇಳಾಪಟ್ಟಿ: ಜೂನ್‌.14 ರಂದು ಅಧಿಸೂಚನೆ, ಜೂನ್‌.21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಜೂನ್‌. 24 ನಾಮಪತ್ರ ಪರಿಶೀಲನೆ, ಜೂನ್‌.26 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ, ಜುಲೈ 10 ಮತದಾನ ದಿನ, ಜುಲೈ 13 ಫಲಿತಾಂಶ.

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಮಾಹಿತಿ: ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ್‌, ಪಂಜಾಬ್‌, ಹಿಮಾಚಲ ಪ್ರದೇಶದ ಒಟ್ಟು 13ಸ್ಥಾನಗಳಿಗೆ ಜುಲೈ 10ರಂದು ಚುನಾವಣೆ ನಡೆಯಲಿದೆ.

Tags:
error: Content is protected !!