ದಾವಣಗೆರೆ : ಫೇಸ್‌ಬುಕ್‌ನಲ್ಲಿ ಕ್ರಾಂಗೆಸ್ ಅಭ್ಯರ್ಥಿಗಳಾದ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ತೇಜೋವಧೆ ಮಾಡಿರುವುದರ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಹರೀಶ್ ಕೆ.ಎಲ್.ಬಸಾಪುರ ದೂರು ನೀಡಿದ್ದಾರೆ.
‘ಕಾಂಗ್ರೆಸ್ ಕಳ್ಳೆಕಾಯ್’ ಹೆಸರಿನ ಪುಟದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ತೇಜೋವಧೆ ಮಾಡಿರುವ ವಿಡಿಯೊ ಹಾಕಿರುವವರು ಹಾಗೂ ಅದನ್ನು ಶೇರ್ ಮಾಡಿದವರ ಕ್ರಮ ಕೈಗೊಳ್ಳಬೇಕು’ ಎಂದು ಸಿಇಎನ್ ಠಾಣೆಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.