ಪೊಲೀಸ್‌ ಠಾಣೆಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭೇಟಿ

ಬೆಂಗಳೂರು : ನಟ ದರ್ಶನ್‌ ಇರುವ ಠಣೆಗೆ ಅವರ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ ಕಳೆದ ಒಂದು ವಾರದಿಂದ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಈ ವೇಳೆ ದರ್ಶನ್‌ ಸ್ನೇಹಿತರಾಗಿ ಅಥವ ಕುಟುಂಬಸ್ಥರಾಗಲಿ ಯಾರೊಬ್ಬರಿಗೂ ಅವರನ್ನು ಭೇಟಿ ಮಾಡುವ ಅವಕಾಶವನ್ನು ನೀಡಿರಲಿಲ್ಲ.

ಆದರ ಇದೀಗ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ ಇರುವ ಅನ್ನಪೋರ್ಣೇಶ್ವರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ದರ್ಶನ ಪರ ವಾದ ಮಂಡಿಸಲು ವಿಜಯಲಕ್ಷ್ಮಿ ಅವರೆ ವಕೀಲರನ್ನು ನೇಮಿಸಿದ್ದರು. ಬಳಿಕ ಕೊಲೆಯಾದ ಮಲ್ಲಿಕಾರ್ಜುನಸ್ವಾಮಿಯ ಬಟ್ಟೆ ವಿಜಯಲಕ್ಷ್ಮಿ ಅವರ ನಿವಾಸದಲ್ಲಿ ಸಿಕ್ಕಿದ್ದು, ಅದನ್ನು ಪೊಲೀಸರು ಸೀಸ್‌ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ವಿಜಯಲಕ್ಷ್ಮಿ ಅವರು ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಭೇಟಿ ನೀಡಿರುವುದು ಅನೇಕ ಕುತೂಹಲಗಳಿಗೆ ಕಾರಣವಾಗಿದೆ.