Mysore
25
overcast clouds

Social Media

ಮಂಗಳವಾರ, 12 ಮೇ 2026
Light
Dark

‘ದ್ರಾವಿಡ ಸಿದ್ಧಾಂತಗಳ ನಿರ್ಮೂಲನೆ’ ಕುರಿತ ಸಮಾವೇಶ: ಅನುಮತಿ ನಿರಾಕರಿಸಿದ ಮದ್ರಾಸ್‌ ಹೈಕೋರ್ಟ್‌

ಚೆನ್ನೈ : ದ್ರಾವಿಡ ಸಿದ್ಧಾಂತವನ್ನು ನಿರ್ಮೂಲನೆ ಕುರಿತಾದ ಸಮಾವೇಶವೊಂದನ್ನು ನಡೆಸಲು ಮದ್ರಾಸ್‌ ಹೈಕೋರ್ಟ್‌ ಅನುಮತಿ ನಿರಾಕರಿಸಿದೆ. ಬಹು-ನಂಬಿಕೆ ವ್ಯವಸ್ಥೆಯ ಸಹ-ಅಸ್ತಿತ್ವವು ಭಾರತದ ಅಸ್ಮಿತೆಯ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಯಾರಿಗೂ ಯಾವುದೇ ಸಿದ್ಧಾಂತವನ್ನು ನಿರ್ಮೂಲನೆಗೈಯ್ಯುವ ಸಭೆ ನಡೆಸುವ ಹಕ್ಕಿಲ್ಲ ಎಂದು ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಜಿ ಜಯಚಂದ್ರನ್‌ ಹೇಳಿದ್ದಾರೆ.

“ದ್ರಾವಿಡ ಸಿದ್ಧಾಂತಗಳು ಮತ್ತು ಇತರ ಸಾಮಾಜಿಕ ಸಮಸ್ಯೆಗಳು” ಎಂಬ ಕುರಿತ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಕೋರಿ ಮಗೇಶ್‌ ಕಾರ್ತಿಕೇಯನ್‌ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಮೇಲಿನ ಆದೇಶ ಹೊರಡಿಸಿದೆ.

“ಸನಾತನ ಧರ್ಮದ ನಿರ್ಮೂಲನೆ” ಕುರಿತ ಸಮಾವೇಶದಲ್ಲಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ ಆಡಳಿತ ಡಿಎಂಕೆಯ ಸದಸ್ಯರ ವಿರುದ್ಧ ತಮಿಳುನಾಡು ಪೊಲೀಸರೇಕೆ ಕ್ರಮಕೈಗೊಂಡಿರಲಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅಧಿಕಾರದಲ್ಲಿರುವವರು ಜನರನ್ನು ಸಿದ್ಧಾಂತ, ಜಾತಿ, ಧರ್ಮಗಳ ಆಧಾರದಲ್ಲಿ ವಿಭಜಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ದೂರ ಉಳಿದು ಮದ್ಯಪಾನ, ಭ್ರಷ್ಟಾಚಾರ, ಅಸ್ಪೃಶ್ಯತೆ ಮತ್ತು ಇತರ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಪ್ರಯತ್ನಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

ಅರ್ಜಿದಾರರ ಮನವಿಗೆ ಒಪ್ಪಿದಲ್ಲಿ ಅದು ಶಾಂತಿ ಇನ್ನಷ್ಟು ಹದಗೆಡಲು ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾದಂತೆ, ಅದನ್ನು ನಿರ್ಮೂಲನೆ ಮಾಡಬೇಕೆಂದು ಸಿಎಂ ಎಂ.ಕೆ. ಸ್ಟ್ಯಾಲಿನ್‌ ಅವರ ಪುತ್ರ ಸಚಿವ ಉದಯನಿಧಿ ಸ್ಟ್ಯಾಲಿನ್‌ ಹೇಳಿದ್ದು ವಿವಾದಕ್ಕೀಡಾಗಿತ್ತ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!