Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಶಿವಮೊಗ್ಗವನ್ನು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ : ಸಿ.ಟಿ ರವಿ

ಬೆಂಗಳೂರು : ಶಿವಮೊಗ್ಗವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ. ಕೋಮು ಶಕ್ತಿಗಳನ್ನು ರಾಜಕೀಯವಾಗಿ ಬಳಸಿಕೊಂಡು ವಿಭಜನೆ ಮಾಡಲು ಪ್ರಯತ್ನ ನಡೆಯುತ್ತಿದೆ. ಇಂತಹ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಶಿವಮೊಗ್ಗದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದ ಘಟನೆ ದುರಾದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿಕೊಂಡು ಗಲಭೆ ಉಂಟು ಮಾಡಬೇಕೆಂಬ ಉದ್ದೇಶ ಪೂರ್ವಯೋಜಿತ ಘಟನೆ ಅನ್ನೋದು ಸ್ಪಷ್ಟವಾಗಿದೆ. ಶಿವಮೊಗ್ಗ ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿದೆ. ಇದು ಗೊತ್ತಿದ್ದೂ ಅಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿದವನ ಆರಾಧನೆಗೆ, ಪ್ರತಿಕೃತಿ ಹಾಕುವುದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಯಾಕೆ ಅವಕಾಶ ಕೊಟ್ರು? ಶಿವಮೊಗ್ಗದಲ್ಲಿ ನಡೆದಿದ್ದು ಈದ್ ಮೀಲಾದೋ? ಟಿಪ್ಪು ಜಯಂತಿಯೋ? ಔರಂಗಜೇಬ್ ಜಯಂತಿಯೋ? ಎಂದು ಪ್ರಶ್ನೆ ಮಾಡಿದ್ದಾರೆ.

ಟಿಪ್ಪು, ಔರಂಗಜೇಬ್ ಹಿಂದೂಗಳ ಮಾರಣ ಹೋಮ ನಡೆಸಿದವರು. ಟಿಪ್ಪು ಮೈಸೂರು ಒಡೆಯರ್ ಆಡಳಿತ ಪತನ ಮಾಡಿದವನು. ಕನ್ನಡ ಭಾಷೆಯ ಬದಲು, ಪರ್ಶಿಯನ್ ಭಾಷೆ ಆಡಳಿತ ಭಾಷೆಯಾಗಿ ಹೇರಿದವನು. ಅವನನ್ನು ವಿಜೃಂಭಿಸಲು ಅವಕಾಶ ಕೊಟ್ಟಿದ್ದಾರೆ. ಅಲ್ಲದೇ ಹಾಡಹಗಲೇ ತಲ್ವಾರ್ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ, ಅಲ್ಲಿ ಹಾಕಿದ್ದ ಜಿಹಾದ್ ಬರವಣಿಗೆಗಳು ಇವೆಲ್ಲವೂ ಪ್ರಚೋದಿಸುವ ಸಂಗತಿಗಳೇ ಆಗಿವೆ. ಇದೆಲ್ಲವನ್ನೂ ಮೊದಲೇ ಜಿಲ್ಲಾಡಳಿತ ತೆರವು ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ