Mysore
29
clear sky

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಆಪಾದನೆ ಬಂದಿದೆ ಎದುರಿಸೋಣ: ಪೋಕ್ಸೋ ಪ್ರಕರಣ ಸಂಬಂಧ ಬಿಎಸ್‌ವೈ ಫಸ್ಟ್‌ ರಿಯಾಕ್ಷನ್‌!

ಬೆಂಗಳೂರು: ಮಾಜಿ ಮಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಮೇಲೆ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಬಾಲಕೀಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದರುವ ಮಾಜಿ ಸಿಎಂ ಬಿಎಸ್‌ವೈ ಯಾರೋ ಒಬ್ಬ ಹೆಣ್ಣು ಮಗಳು ದೂರು ಕೊಟ್ಟಿದ್ದಾಳೆ, ಇರಲಿ ಎದುರಿಸೋಣ ಎಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದರು ಅವರು, ಸುಮಾರು ಒಂದೂವರೆ ತಿಂಗಳ ಹಿಂದಿನಿಂದಲೂ ತಾಯಿ-ಮಗಳು ನಮ್ಮ ಮನೆ ಕಡೆ ನನ್ನನ್ನು ಕಾಣಲು ಬಂದಿದ್ದರು, ನಾನು ಹಲವಾರು ಬಾರಿ ನಿರಾಕರಿಸಿದ್ದೆ. ಒಂದು ದಿನ ಅಳುತ್ತಾ ಮನೆ ಮುಂದೆ ನಿಂತಿದ್ದಾಗ ಕರೆದು ಒಳಗೆ ಕೂರಿಸಿ ಅವರ ಸಮಸ್ಯೆಗಳ ಬಗ್ಗೆ ಆಲಿಸಿದೆ. ಅವರು ನನ್ನ ಬಳಿ ಅವರ ಸಮಸ್ಯೆಗಳನ್ನು ಹೇಳಿಕೊಂಡರು. ನಂತರ ನಾನು ಅವರಿಗೆ ಕಮಿಷನರ್‌ ಭೇಟಿಯಾಗುವಂತೆ ಸೂಚಿಸಿದ್ದೆ ಎಂದರು.

ತುಂಬಾ ಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದರಿಂದ ಅವರಿಗೆ ಒಂದಷ್ಟು ಹಣದ ಸಹಾಯವನ್ನು ಮಾಡಿ ತಾಯಿ-ಮಗಳನ್ನು ಕಳಿಸಿಕೊಟ್ಟೆ. ಆದರೆ, ಈಗ ನೋಡಿದರೆ ಆಕೆ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಇರಲಿ ಇದನ್ನು ಎದುರಿಸೋಣ ಮತ್ತು ಈ ಬಗ್ಗೆ ಈ ಹೆಚ್ಚು ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಿಳಿಸಿದರು.

Tags:
error: Content is protected !!