Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಆಕಾಶ ಏರ್ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ : ವಾರಣಾಸಿ ಏರ್ಪೋರ್ಟ್‌ ನಲ್ಲಿ ಉದ್ವಿಗ್ನ ವಾತಾವರಣ

ಮುಂಬೈ : ದೇಶದ ವಾಣಿಜ್ಯ ರಾಜಧಾನಿ ಮುಂಬೈನಿಂದ ವಾರಣಾಸಿಗೆ ಹೊರಟಿದ್ದ ಆಕಾಶ ಏರ್ಲೈನ್ಸ್ ವಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ನಡೆದಿದೆ.

ಏರ್ ಟ್ರಾಫಿಕ್ ಕಂಟ್ರೋಲ್ ಬಾಂಬ್ ಬೆದರಿಕೆಯ ಬಗ್ಗೆ ವಿಮಾನದ ಕ್ಯಾಪ್ಟನ್ ಗೆ ಮಾಹಿತಿ ನೀಡಿದ ನಂತರ ಸಾಧ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿ ವಿಮಾನವನ್ನು ವಾರಣಾಸಿಯಲ್ಲಿ ಇಳಿಸಲಾಯಿತು. ವಿಮಾನವು ಪ್ರತ್ಯೇಕ ರನ್ ವೇಯಲ್ಲಿ ಇಳಿದು ಪ್ರಯಾಣಿಕರನ್ನು ತಕ್ಷಣವೇ ಇಳಿಸಲಾಯಿತು.

ಸಿಐಎಸ್‍ಎಫ್ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಕಾಲ ವಿಮಾನದಲ್ಲಿ ತೀವ್ರ ಶೋಧ ನಡೆಸಿದರು. ತಪಾಸಣೆ ವೇಳೆ ಏನೂ ಪತ್ತೆಯಾಗಿಲ್ಲ.
ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ಎಲ್ಲವೂ ಸಹಜವಾಗಿದೆ. ಬಾಂಬ್ ಬಗ್ಗೆ ಮಾಹಿತಿ ಬಂದಾಗ, ವಿಮಾನ ನಿಲ್ದಾಣದ ಅಧಿಕಾರಿಗಳು ಸಂಪೂರ್ಣ ಮುಂಜಾಗ್ರತೆ ವಹಿಸಿ ಪರಿಶೀಲಿಸಿದಾಗ ಎಲ್ಲವೂ ಯಥಾಸ್ಥಿತಿಯಲ್ಲಿದೆ. ಈ ವಿಮಾನ ವಾರಣಾಸಿಗೆ ಬರುತ್ತಿತ್ತು. ಮುನ್ನೆಚ್ಚರಿಕೆಯಾಗಿ ಪ್ರತ್ಯೇಕ ರನ್ ವೇ ಯಲ್ಲಿ ಇಳಿಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!