Mysore
26
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ಬಿಹಾರ್: ವರದಕ್ಷಿಣೆಗೆ ಬುಲೆಟ್‌ ಬೈಕ್‌ ನೀಡದ್ದಕ್ಕೆ ವಿಷ ಹಾಕಿ ಸೊಸೆಯನ್ನೇ ಕೊಂದ ಅತ್ತೆ

ಪಾಟ್ನಾ: ವರದಕ್ಷಿಣೆ ರೂಪದಲ್ಲಿ ಬುಲೆಟ್‌ ಬೈಕ್‌ ಕೊಡದಿದ್ದಕ್ಕೆ ಸೊಸೆಯನ್ನು ಹಾಕಿ ಕೊಂದಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಬಕ್ಸರ್ ಜಿಲ್ಲೆಯ ಪವರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಬುಲೆಟ್‌ ಬೈಕ್‌ ನೀಡುವ ಬೇಡಿಕೆಯನ್ನು ಗಂಡನ ಮನೆಯವರು ಇಟ್ಟಿದ್ದರು. ವರದಕ್ಷಿಣೆಯ ಸಲುವಾಗಿ ಬುಲೆಟ್‌ ನೀಡಬೇಕೆಂದು ಅತ್ತೆ ಸೇರಿದಂತೆ ಗಂಡನ ಮನೆಯವರು ಮಹಿಳೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಮೃತಳ ಸಹೋದರ ಹೇಳಿದ್ದಾರೆ.

ಮಹಿಳೆಯ ಅತ್ತೆ ಸೊಸೆಗೆ ವಿಷ ಹಾಕಿದ್ದು, ಅದೇ ದಿನ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯನ್ನು ತವರಿಗೆ ಕಳುಹಿಸಿದ್ದಾರೆ. ಆದರೆ ಸೊಸೆ ಅಲ್ಲಿ ಮೃತಪಟ್ಟಿದ್ದಾಳೆ ವರದಿ ತಿಳಿಸಿದೆ.

ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅತ್ತೆ ಸೇರಿ ಇಬ್ಬರ ವಿರುದ್ಧ  ದೂರು ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!