ಚಿತ್ರದುರ್ಗ : ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಶಾಸಕರೊಬ್ಬರು ವಾರ್ಡ್‍ನ್‍ಗೆ ಹೊಡೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾನೂನು ಪದವಿಯ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹಾಸ್ಟೆಲ್‍ಗೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳು ಕೊಳೆತ ತರಕಾರಿ ಹಾಕಿದ ಉಪಾಹಾರ, ಊಟ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಚಿತ್ರದುರ್ಗ ಶಾಸಕರು, ಇನ್ನೊಮ್ಮೆ ಈ ರೀತಿ ಕಳಪೆ ಊಟ, ಉಪಾಹಾರ ಕೊಟ್ಟರೆ ಅದನ್ನು ವಾರ್ಡನ್‍ಗೆ ತಿನ್ನಿಸಿ. ಬಳಿಕ ರೂಮಲ್ಲಿ ಹಾಕಿ ಚೆನ್ನಾಗಿ ಹೊಡೆಯಿರಿ. ಏನಾದರೂ ಸಮಸ್ಯೆಯಾದರೆ ನಾನಿರುತ್ತೇನೆ ಯೋಚಿಸಬೇಡಿ ಎಂದಿದ್ದಾರೆ. ಶಾಸಕರು ಹೇಳಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.