Mysore
23
clear sky

Social Media

ಭಾನುವಾರ, 26 ಏಪ್ರಿಲ 2026
Light
Dark

ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕ !

ಚಿತ್ರದುರ್ಗ: ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕಗೊಂಡಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮಠದ ಧಾರ್ಮಿಕ ಕಾರ್ಯಕ್ರಮಗಳ ಮುಂದುವರಿಕೆ ಮತ್ತು ಮೇಲುಸ್ತುವಾರಿಗೆ ಬಸವಕುಮಾರ ಸ್ವಾಮೀಜಿಗೆ ಅಧಿಕಾರ ವಹಿಸಲಾಗಿದೆ.

ಬಸವಕುಮಾರ ಸ್ವಾಮೀಜಿ ವಿಜಯಪುರದ ವನಶ್ರೀ ಮಹಾ ಸಂಸ್ಥಾನದ ಫೀಠಾಧಿಪತಿಯಾಗಿದ್ದಾರೆ. ಹಂಪಿ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಪಡೆದಿದ್ದಾರೆ.

ಬಸವಕುಮಾರ ಸ್ವಾಮೀಜಿ ಮಠದ ಆಡಳಿತದಲ್ಲಿ ಸಂಪೂರ್ಣ ಸ್ವತಂತ್ರ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ದೈನಂದಿನ ಪೂಜಾ ಕೈಂಕರ್ಯ ನಿರ್ವಹಣೆ ಮಾಡಲಿದ್ದಾರೆ.

ಅದರಂತೆ ಇದೀಗ ಸಂಪೂರ್ಣ ಖರ್ಚು ವೆಚ್ಚಗಳನ್ನು ಮಠದ ಖಾತೆಯಿಂದ ಬಳಕೆ‌ ಮಾಡಬಹುದಾಗಿದ್ದು, ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆ ಹೂಡಲು ಕಮಿಟಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ

Tags:
error: Content is protected !!